عَنِ الْبَرَاءِ رضي الله عنه:
عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ قَالَ فِي الْأَنْصَارِ: «لَا يُحِبُّهُمْ إِلَّا مُؤْمِنٌ، وَلَا يُبْغِضُهُمْ إِلَّا مُنَافِقٌ، مَنْ أَحَبَّهُمْ أَحَبَّهُ اللهُ وَمَنْ أَبْغَضَهُمْ أَبْغَضَهُ اللهُ».
[صحيح] - [متفق عليه] - [صحيح مسلم: 75]
المزيــد ...
ಬರಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳ ಬಗ್ಗೆ ಹೇಳಿದರು: "ಸತ್ಯವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ಪ್ರೀತಿಸುವುದಿಲ್ಲ ಮತ್ತು ಕಪಟವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ದ್ವೇಷಿಸುವುದಿಲ್ಲ. ಯಾರು ಅವರನ್ನು ಪ್ರೀತಿಸುತ್ತಾನೋ ಅವನನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಯಾರು ಅವರನ್ನು ದ್ವೇಷಿಸುತ್ತಾನೋ ಅವನನ್ನು ಅಲ್ಲಾಹು ದ್ವೇಷಿಸುತ್ತಾನೆ."
[صحيح] - [متفق عليه] - [صحيح مسلم - 75]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮದೀನಾ ನಿವಾಸಿಗಳಾದ ಅನ್ಸಾರ್‌ಗಳನ್ನು ಪ್ರೀತಿಸುವುದು ಸತ್ಯವಿಶ್ವಾಸದ ಸಂಪೂರ್ಣತೆಯ ಚಿಹ್ನೆಯಾಗಿದೆ. ಅವರು ಇಸ್ಲಾಂ ಧರ್ಮಕ್ಕೆ ಮತ್ತು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರಂಭಿಕ ಬೆಂಬಲ ನೀಡಿದ್ದು, ಮುಸ್ಲಿಮರಿಗೆ ಆಸರೆ ನೀಡಲು ಪರಿಶ್ರಮಿಸಿದ್ದು ಮತ್ತು ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತು ಹಾಗೂ ಜೀವವನ್ನು ತ್ಯಾಗ ಮಾಡಿದ್ದು ಇದಕ್ಕೆ ಕಾರಣವಾಗಿದೆ. ಅವರನ್ನು ದ್ವೇಷಿಸುವುದು ಕಾಪಟ್ಯದ ಚಿಹ್ನೆಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಅನ್ಸಾರ್‌ಗಳನ್ನು ಪ್ರೀತಿಸಿದವರನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಅವರನ್ನು ದ್ವೇಷಿಸಿದವರನ್ನು ಅಲ್ಲಾಹು ದ್ವೇಷಿಸುತ್ತಾನೆ.