ಹದೀಸ್‌ಗಳ ಪಟ್ಟಿ

ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ
عربي ಆಂಗ್ಲ ಉರ್ದು
ಅಲ್ಲಾಹನನ್ನು ಭಯಪಡಿರಿ, ಕಿವಿಗೊಡಿರಿ ಮತ್ತು ಅನುಸರಿಸಿರಿ, ನಿಮ್ಮ ಆಡಳಿತಗಾರನು ಅಬಿಸೀನಿಯಾದ ಗುಲಾಮನಾಗಿದ್ದರೂ ಸಹ. ನನ್ನ ಕಾಲಾನಂತರ ನಿಮ್ಮಲ್ಲಿ ಯಾರು ಬದುಕಿರುತ್ತಾರೋ ಅವರು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುವರು. ಆಗ ನೀವು ನನ್ನ ಚರ್ಯೆಗೆ ಮತ್ತು ಸರಿಯಾದ ಸನ್ಮಾರ್ಗದಲ್ಲಿರುವ ಖಲೀಫರ ಚರ್ಯೆಗೆ ಬದ್ಧರಾಗಿರಿ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನ್ಸಾರ್‌ಗಳ ಬಗ್ಗೆ ಹೇಳಿದರು: "ಸತ್ಯವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ಪ್ರೀತಿಸುವುದಿಲ್ಲ ಮತ್ತು ಕಪಟವಿಶ್ವಾಸಿಯ ಹೊರತು ಇನ್ನಾರೂ ಅವರನ್ನು ದ್ವೇಷಿಸುವುದಿಲ್ಲ. ಯಾರು ಅವರನ್ನು ಪ್ರೀತಿಸುತ್ತಾನೋ ಅವನನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಯಾರು ಅವರನ್ನು ದ್ವೇಷಿಸುತ್ತಾನೋ ಅವನನ್ನು ಅಲ್ಲಾಹು ದ್ವೇಷಿಸುತ್ತಾನೆ
عربي ಆಂಗ್ಲ ಉರ್ದು
ನಾನು ಈ ಪತಾಕೆಯನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುವ ಒಬ್ಬ ವ್ಯಕ್ತಿಗೆ ಕೊಡುವೆನು. ಅವನ ಕೈಯಿಂದ ಅಲ್ಲಾಹು ವಿಜಯವನ್ನು ದಯಪಾಲಿಸುವನು
عربي ಆಂಗ್ಲ ಉರ್ದು
ನನ್ನ ಸಂಗಡಿಗರನ್ನು (ಸಹಾಬಾಗಳನ್ನು) ನಿಂದಿಸಬೇಡಿ. ನಿಮ್ಮಲ್ಲೊಬ್ಬನು ಉಹುದ್ ಬೆಟ್ಟದಷ್ಟು ಚಿನ್ನವನ್ನು ದಾನ ಮಾಡಿದರೂ ಅವರಲ್ಲೊಬ್ಬರು ದಾನ ಮಾಡಿದ ಒಂದು ಬೊಗಸೆಗೆ ಅಥವಾ ಅದರ ಅರ್ಧಕ್ಕೆ ಅದು ತಲುಪುವುದಿಲ್ಲ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ
عربي ಆಂಗ್ಲ ಉರ್ದು
ಹೋಗು! ಸಾಬಿತ್‌ರೊಂದಿಗೆ ಹೇಳು: ನೀವು ನರಕವಾಸಿಯಲ್ಲ, ಬದಲಿಗೆ ನೀವು ಸ್ವರ್ಗವಾಸಿಯಾಗಿದ್ದೀರಿ
عربي ಆಂಗ್ಲ ಉರ್ದು