عن جابر رضي الله عنهما قال: قال رسول الله صلى الله عليه وسلم:
«لن يدخلَ النارَ رجلٌ شَهِد بدرًا والحُدَيْبِيَة».
[صحيح] - [رواه أحمد، وأصله في صحيح مسلم] - [مسند أحمد: 15262]
المزيــد ...
ಜಾಬಿರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ".
[صحيح] - [رواه أحمد وأصله في صحيح مسلم] - [مسند أحمد - 15262]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಹಿಜರಿ ಎರಡನೇ ವರ್ಷದಲ್ಲಿ ನಡೆದ ಬದ್ರ್ ಯುದ್ಧದಲ್ಲಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೋರಾಡಿದವರಾಗಲಿ, ಅಥವಾ ಹಿಜರಿ ಆರನೇ ವರ್ಷದಲ್ಲಿ ನಡೆದ ಹುದೈಬಿಯ್ಯ ಒಪ್ಪಂದ – ಇದರಲ್ಲಿ 'ಬೈಅತು ರ್ರಿದ್ವಾನ್' ಸಹ ಸೇರಿದೆ – ದಲ್ಲಿ ಹಾಜರಿದ್ದವರಾಗಲಿ ನರಕವನ್ನು ಪ್ರವೇಶಿಸುವುದಿಲ್ಲ.