عَنْ أَبِي سَعِيدٍ الخُدْرِيِّ رَضِيَ اللَّهُ عَنْهُ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«لاَ تَسُبُّوا أَصْحَابِي، فَلَوْ أَنَّ أَحَدَكُمْ أَنْفَقَ مِثْلَ أُحُدٍ ذَهَبًا مَا بَلَغَ مُدَّ أَحَدِهِمْ، وَلاَ نَصِيفَهُ».
[صحيح] - [متفق عليه] - [صحيح البخاري: 3673]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನ ಸಂಗಡಿಗರನ್ನು (ಸಹಾಬಾಗಳನ್ನು) ನಿಂದಿಸಬೇಡಿ. ನಿಮ್ಮಲ್ಲೊಬ್ಬನು ಉಹುದ್ ಬೆಟ್ಟದಷ್ಟು ಚಿನ್ನವನ್ನು ದಾನ ಮಾಡಿದರೂ ಅವರಲ್ಲೊಬ್ಬರು ದಾನ ಮಾಡಿದ ಒಂದು ಬೊಗಸೆಗೆ ಅಥವಾ ಅದರ ಅರ್ಧಕ್ಕೆ ಅದು ತಲುಪುವುದಿಲ್ಲ."
[صحيح] - [متفق عليه] - [صحيح البخاري - 3673]
ಸಹಾಬಿಗಳನ್ನು, ವಿಶೇಷವಾಗಿ ಮೊತ್ತಮೊದಲು ಇಸ್ಲಾಂ ಧರ್ಮವನ್ನು ಪ್ರವೇಶಿಸಿದ ಮುಹಾಜಿರ್ ಮತ್ತು ಅನ್ಸಾರ್‌ಗಳನ್ನು ನಿಂದಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ನಂತರ, ಅವರು ತಿಳಿಸುವುದೇನೆಂದರೆ, ಜನರಲ್ಲಿ ಒಬ್ಬನು ಉಹುದ್ ಬೆಟ್ಟದಷ್ಟು ಚಿನ್ನವನ್ನು ದಾನ ಮಾಡಿದರೆ ಅವನಿಗೆ ದೊರೆಯುವ ಪ್ರತಿಫಲವು ಸಹಾಬಿಗಳಲ್ಲಿ ಒಬ್ಬರು ದಾನ ಮಾಡಿದ ಒಂದು ಬೊಗಸೆಯಷ್ಟು ಅಥವಾ ಅದರ ಅರ್ಧದಷ್ಟು ಆಹಾರಕ್ಕೆ ದೊರೆಯುವ ಪ್ರತಿಫಲಕ್ಕೂ ಸಮಾನವಾಗುವುದಿಲ್ಲ.ಒಂದು ಮುದ್ದ್ ಎಂದರೆ ಸಾಮಾನ್ಯ ಗಾತ್ರದ ವ್ಯಕ್ತಿಯ ಎರಡು ಅಂಗೈಗಳು ತುಂಬುವಷ್ಟು ಪ್ರಮಾಣ. ಅವರಿಗಿದ್ದ ಮಹಾ ನಿಷ್ಕಳಂಕತೆ, ನಿರ್ಮಲ ಉದ್ದೇಶ, ದಾನ ಮಾಡುವುದರಲ್ಲಿ ಅವರು ತೋರುತ್ತಿದ್ದ ಸ್ಪರ್ಧಾ ಮನೋಭಾವ ಹಾಗೂ ಮಕ್ಕಾ ವಿಜಯಕ್ಕೆ ಮೊದಲು ಯುದ್ಧದ ತುರ್ತು ಅವಶ್ಯಕತೆಯ ಸಂದರ್ಭಗಳಲ್ಲಿ ಅವರು ಮಾಡಿದ ಯುದ್ಧಗಳು ಅದಕ್ಕೆ ಕಾರಣಗಳಾಗಿವೆ.