عن عمران بن حصين رضي الله عنه قال: كَانَتْ بِي بَوَاسِيرُ، فَسَأَلْتُ النَّبِيَّ صَلَّى اللهُ عَلَيْهِ وَسَلَّمَ عَنِ الصَّلَاةِ، فَقَالَ:
«صَلِّ قَائِمًا، فَإِنْ لَمْ تَسْتَطِعْ فَقَاعِدًا، فَإِنْ لَمْ تَسْتَطِعْ فَعَلَى جَنْبٍ».

[صحيح] - [رواه البخاري] - [صحيح البخاري: 1117]
المزيــد ...

ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:ನನಗೆ ಮೂಲವ್ಯಾಧಿ ಇತ್ತು ಆದ್ದರಿಂದ ನಾನು ನಮಾಝ್ ನಿರ್ವಹಿಸುವ ಬಗ್ಗೆ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದಾಗ, ಅವರು ಹೇಳಿದರು:
"ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ."

[صحيح] - [رواه البخاري] - [صحيح البخاري - 1117]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝನ್ನು ಮೂಲವಾಗಿ ನಿಂತುಕೊಂಡೇ ನಿರ್ವಹಿಸಬೇಕಾಗಿದೆ. ಆದರೆ ನಿಂತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ, ಕುಳಿತು ನಿರ್ವಹಿಸಬೇಕು. ಕುಳಿತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಬೇಕು.

ಹದೀಸಿನ ಪ್ರಯೋಜನಗಳು

  1. ಬುದ್ಧಿಯು ಸ್ತಿಮಿತದಲ್ಲಿರುವ ತನಕ ಯಾರಿಗೂ ನಮಾಝ್‌ನಲ್ಲಿ ವಿನಾಯಿತಿಯಿಲ್ಲ. ಸಾಧ್ಯವಾಗುವ ರೀತಿಯಲ್ಲಿ ನಿಂತು, ಕುಳಿತು, ಮಲಗಿ ನಮಾಝ್ ನಿರ್ವಹಿಸಬೇಕಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಇಸ್ಲಾಂ ಧರ್ಮದ ಸಹಿಷ್ಣುತೆ ಮತ್ತು ಸರಳತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ದಾಸನಿಗೆ ತನಗೆ ಸಾಧ್ಯವಾಗುವ ರೀತಿಯಲ್ಲಿ ಆರಾಧನೆ ನಿರ್ವಹಿಸಲು ಅನುಮತಿಸಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಉರ್ದು ಸ್ಪ್ಯಾನಿಷ್ ಇನ್ನಷ್ಟು (62)
ಇನ್ನಷ್ಟು