عَنْ أَبِي عَبْدِ اللَّهِ جَابِرِ بْنِ عَبْدِ اللَّهِ الْأَنْصَارِيِّ رَضِيَ اللَّهُ عَنْهُمَا:
أَنَّ رَجُلًا سَأَلَ رَسُولَ اللهِ صَلَّى اللهُ عَلَيْهِ وَسَلَّمَ، فَقَالَ: أَرَأَيْتَ إِذَا صَلَّيْتُ المَكْتُوبَاتِ، وَصُمْتُ رَمَضَانَ، وَأَحْلَلْتُ الحَلَالَ، وَحَرَّمْتُ الحَرَامَ، وَلَمْ أَزِدْ عَلَى ذَلِكَ شَيْئًا، أَأَدْخُلُ الجَنَّةَ؟ قَالَ: «نَعَمْ».
[صحيح] - [رواه مسلم] - [الأربعون النووية: 22]
المزيــد ...
ಅಬೂ ಅಬ್ದುಲ್ಲಾ ಜಾಬಿರ್ ಇಬ್ನ್ ಅಬ್ದುಲ್ಲಾ ಅಲ್-ಅನ್ಸಾರಿ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದನು: "ಒಂದು ವೇಳೆ ನಾನು ಕಡ್ಡಾಯಗೊಳಿಸಲ್ಪಟ್ಟ ನಮಾಝ್‌ಗಳನ್ನು ನಿರ್ವಹಿಸಿದರೆ, ರಮದಾನ್‌ನಲ್ಲಿ ಉಪವಾಸ ಆಚರಿಸಿದರೆ, ಹಲಾಲ್ ಅನ್ನು ಹಲಾಲ್ ಎಂದು (ಪರಿಗಣಿಸಿ) ಅನುಸರಿಸಿದರೆ, ಹರಾಮ್ ಅನ್ನು ಹರಾಮ್ ಎಂದು (ಪರಿಗಣಿಸಿ) ತ್ಯಜಿಸಿದರೆ, ಮತ್ತು ಅದರ ಮೇಲೆ ಏನನ್ನೂ ಹೆಚ್ಚಿಸದಿದ್ದರೆ (ಐಚ್ಛಿಕ ಕಾರ್ಯಗಳನ್ನು ಮಾಡದಿದ್ದರೆ), ನಾನು ಸ್ವರ್ಗವನ್ನು ಪ್ರವೇಶಿಸುವೆನೇ?" ಅವರು (ಪ್ರವಾದಿ) ಹೇಳಿದರು: "ಹೌದು".
[صحيح] - [رواه مسلم] - [الأربعون النووية - 22]
ಈ ಹದೀಸ್‌ನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಒಬ್ಬ ವ್ಯಕ್ತಿ ಯಾವುದೇ ಐಚ್ಛಿಕ ನಮಾಝ್‌ಗಳನ್ನು ನಿರ್ವಹಿಸದೆ ಕೇವಲ ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ಮಾತ್ರ ನಿರ್ವಹಿಸಿದರೆ, ಮತ್ತು ಯಾವುದೇ ಐಚ್ಚಿಕ ಉಪವಾಸಗಳನ್ನು ಆಚರಿಸದೆ ಕೇವಲ ರಮದಾನ್ ತಿಂಗಳಲ್ಲಿ ಮಾತ್ರ ಉಪವಾಸ ಆಚರಿಸಿದರೆ, ಮತ್ತು ಧರ್ಮಸಮ್ಮತವಾಗಿರುವುದನ್ನು ಧರ್ಮಸಮ್ಮತವೆಂದು ಪರಿಗಣಿಸಿ ಅವುಗಳನ್ನು ನಿರ್ವಹಿಸಿದರೆ, ಮತ್ತು ಧರ್ಮನಿಷಿದ್ಧವಾಗಿರುವುದನ್ನು ಧರ್ಮನಿಷಿದ್ಧವೆಂದು ಪರಿಗಣಿಸಿ, ಅವುಗಳಿಂದ ದೂರ ಸರಿದರೆ, ಅವನು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗುತ್ತಾನೆ.