____
[] - []
المزيــد ...
ಅಬೂ ಅಮ್ರ್ (ಅಬೂ ಅಮ್ರ ಎಂದು ಕೂಡ ಕರೆಯಲಾಗುತ್ತದೆ) ಸುಫ್ಯಾನ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ:
ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ, ನಂತರ ದೃಢವಾಗಿ ನಿಲ್ಲಿರಿ."
[صحيح] - [رواه مسلم] - [الأربعون النووية - 21]
ಸಹಾಬಿವರ್ಯರಾದ ಸುಫ್ಯಾನ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಸ್ಲಾಂ ಧರ್ಮದ ಬಗ್ಗೆ ಬೇರೆ ಯಾರಲ್ಲೂ ಕೇಳಬೇಕಾಗಿಲ್ಲದಂತಹ ಸಮಗ್ರವಾದ ಒಂದು ಮಾತನ್ನು ಕಲಿಸಿಕೊಡಬೇಕೆಂದು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಅಲ್ಲಾಹನನ್ನು ಏಕೈಕನೆಂದು ನಂಬಿ, ಅವನೇ ನನ್ನ ಪರಿಪಾಲಕ, ದೇವ, ಸೃಷ್ಟಿಕರ್ತ ಮತ್ತು ಯಾವುದೇ ಸಹಭಾಗಿಗಳಿಲ್ಲದ ನಿಜವಾದ ಆರಾಧ್ಯನೆಂದು ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ. ನಂತರ, ಅಲ್ಲಾಹು ಕಡ್ಡಾಯಗೊಳಿಸಿದ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮತ್ತು ಅವನು ನಿಷೇಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನಿಗೆ ವಿಧೇಯರಾಗಿರಿ ಮತ್ತು ಇದೇ ಸ್ಥಿತಿಯಲ್ಲಿ ಮುಂದುವರಿಯಿರಿ."