____
[] - []
المزيــد ...
ಅಬೂ ಮಸ್‌ಊದ್ ಉಕ್ಬಾ ಇಬ್ನ್ ಅಮ್ರ್ ಅಲ್-ಅನ್ಸಾರಿ ಅಲ್-ಬದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಶಾಂತಿ ಮತ್ತು ಕೃಪೆಯಿರಲಿ) ಹೇಳಿದರು:
"ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು."
[صحيح] - [رواه البخاري] - [الأربعون النووية - 20]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪೂರ್ವ ಪ್ರವಾದಿಗಳ ಹಿತವಚನಗಳ ಪೈಕಿ ಜನರ ನಡುವೆ ಪ್ರಸಾರವಾದ ಮತ್ತು ಜನರು ತಲೆಮಾರುಗಳ ನಂತರ ತಲೆಮಾರುಗಳಿಗೆ ಹಸ್ತಾಂತರಿಸಿ, ಈ ಸಮುದಾಯದವರೆಗೆ ತಲುಪಿದ ಒಂದು ಹಿತವಚನ ಹೀಗಿದೆ: ಅದೇನೆಂದರೆ, ನೀವು ಮಾಡಲು ಉದ್ದೇಶಿಸುವ ಕಾರ್ಯದ ಬಗ್ಗೆ ಆಲೋಚಿಸಿ. ಅದು ನಾಚಿಕೆಯ ಕಾರ್ಯವಲ್ಲದಿದ್ದರೆ ಮಾಡಿರಿ. ನಾಚಿಕೆಯ ಕಾರ್ಯವಾಗಿದ್ದರೆ ಮಾಡಬೇಡಿ. ಏಕೆಂದರೆ, ನಾಚಿಕೆಯು ಕೆಟ್ಟಕೃತ್ಯಗಳನ್ನು ಮಾಡದಂತೆ ತಡೆಯುತ್ತದೆ. ನಾಚಿಕೆಯೆಂಬುದು ಇಲ್ಲದಿದ್ದರೆ ಯಾವುದೇ ಅಶ್ಲೀಲ ಮತ್ತು ದುಷ್ಟಕೃತ್ಯಗಳನ್ನು ಮಾಡಬಹುದಾಗಿದೆ.