ವರ್ಗ:
+ -

عَنْ أَبِي العَبَّاسِ، عَبْدِ الله بْنِ عَبَّاسٍ رَضِيَ اللَّهُ عَنْهُمَا قَالَ: كُنْت خَلْفَ رَسُولِ اللَّهِ صَلَّى اللهُ عَلَيْهِ وَسَلَّمَ يَوْمًا، فَقَالَ:
«يَا غُلَامِ! إنِّي أُعَلِّمُك كَلِمَاتٍ: احْفَظِ اللَّهَ يَحْفَظْكَ، احْفَظِ الله تَجِدْهُ تُجَاهَكَ، إذَا سَأَلْتَ فَاسْأَلِ اللهَ، وَإِذَا اسْتَعَنْتَ فَاسْتَعِنْ بِاَللهِ، وَاعْلَمْ أَنَّ الأُمَّةَ لَوْ اجْتَمَعَتْ عَلَى أَنْ يَنْفَعُوكَ بِشَيْءٍ لَمْ يَنْفَعُوكَ إلَّا بِشَيْءٍ قَدْ كَتَبَهُ اللَّهُ لَكَ، وَإِنِ اجْتَمَعُوا عَلَى أَنْ يَضُرُّوكَ بِشَيْءٍ لَمْ يَضُرُّوكَ إلَّا بِشَيْءٍ قَدْ كَتَبَهُ اللَّهُ عَلَيْكَ؛ رُفِعَتِ الأَقْلَامُ، وَجَفَّتِ الصُّحُفُ». وَفِي رِوَايَةِ غَيْرِ التِّرْمِذِيِّ: «احْفَظِ اللهَ تَجِدْهُ أَمَامَكَ، تَعَرَّفْ إلَى اللهِ فِي الرَّخَاءِ يَعْرِفْكَ فِي الشِّدَّةِ، وَاعْلَمْ أَنَّ مَا أَخْطَأَكَ لَمْ يَكُنْ لِيُصِيبَكَ، وَمَا أَصَابَك لَمْ يَكُنْ لِيُخْطِئَكَ، وَاعْلَمْ أَنَّ النَّصْرَ مَعَ الصَّبْرِ، وَأَنْ الفَرَجَ مَعَ الكَرْبِ، وَأَنَّ مَعَ العُسْرِ يُسْرًا».

[صحيح] - [رواه الترمذي وغيره] - [الأربعون النووية: 19]
المزيــد ...

ಅಬುಲ್-ಅಬ್ಬಾಸ್, ಅಬ್ದುಲ್ಲಾ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ (ವಾಹನದಲ್ಲಿ) ಇದ್ದೆನು. ಆಗ ಅವರು ಹೇಳಿದರು:
"ಓ ಬಾಲಕನೇ! ನಾನು ನಿನಗೆ ಕೆಲವು ಮಾತುಗಳನ್ನು ಕಲಿಸುತ್ತೇನೆ: ನೀನು ಅಲ್ಲಾಹನನ್ನು (ಅವನ ಆಜ್ಞೆಗಳನ್ನು) ರಕ್ಷಿಸು, ಅವನು ನಿನ್ನನ್ನು ರಕ್ಷಿಸುತ್ತಾನೆ. ನೀನು ಅಲ್ಲಾಹನನ್ನು ರಕ್ಷಿಸು, ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣುವೆ. ನೀನು ಕೇಳುವುದಾದರೆ, ಅಲ್ಲಾಹನಲ್ಲಿಯೇ ಕೇಳು, ಮತ್ತು ನೀನು ಸಹಾಯವನ್ನು ಕೋರುವುದಾದರೆ, ಅಲ್ಲಾಹನಲ್ಲಿಯೇ ಸಹಾಯವನ್ನು ಕೋರು. ತಿಳಿದುಕೋ, ಒಂದು ವೇಳೆ ಇಡೀ ಸಮುದಾಯವು ನಿನಗೆ ಯಾವುದಾದರೂ ವಿಷಯದಲ್ಲಿ ಪ್ರಯೋಜನ ನೀಡಲು ಒಟ್ಟುಗೂಡಿದರೂ, ಅಲ್ಲಾಹು ನಿನಗಾಗಿ ಬರೆದಿಟ್ಟದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಯೋಜನವನ್ನು ಅವರು ನಿನಗೆ ನೀಡಲಾರರು. ಮತ್ತು ಒಂದು ವೇಳೆ ಅವರು ನಿನಗೆ ಯಾವುದಾದರೂ ವಿಷಯದಲ್ಲಿ ಹಾನಿ ಮಾಡಲು ಒಟ್ಟುಗೂಡಿದರೂ, ಅಲ್ಲಾಹು ನಿನ್ನ ಮೇಲೆ ಬರೆದಿಟ್ಟದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಹಾನಿಯನ್ನು ಅವರು ನಿನಗೆ ಮಾಡಲಾರರು; ಲೇಖನಿಗಳನ್ನು ಎತ್ತಲಾಗಿದೆ, ಮತ್ತು ಪುಟಗಳು ಒಣಗಿಹೋಗಿವೆ".

[صحيح] - [رواه الترمذي وغيره] - [الأربعون النووية - 19]

ವಿವರಣೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಚಿಕ್ಕವರಾಗಿದ್ದಾಗ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸವಾರಿ ಮಾಡುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: ನಾನು ನಿನಗೆ ಕೆಲವು ವಿಷಯಗಳನ್ನು ಕಲಿಸುತ್ತೇನೆ, ಅಲ್ಲಾಹು ಅವುಗಳಿಂದ ನಿನಗೆ ಪ್ರಯೋಜನ ನೀಡುತ್ತಾನೆ: ಅಲ್ಲಾಹನ ಆದೇಶಗಳನ್ನು ಪಾಲಿಸುವ ಮೂಲಕ ಮತ್ತು ಅವನ ನಿಷೇಧಗಳಿಂದ ದೂರವಿರುವ ಮೂಲಕ ಅವನನ್ನು ರಕ್ಷಿಸು. ಅದು ಹೇಗೆಂದರೆ, ನೀನು ವಿಧೇಯತೆ ಮತ್ತು ಸಾಮೀಪ್ಯದ ಕಾರ್ಯಗಳಲ್ಲಿ ನಿರತನಾಗಿರುವುದನ್ನು ಅವನು ಕಾಣಬೇಕು. ನಿನ್ನನ್ನು ಪಾಪಗಳು ಹಾಗೂ ಅಪರಾಧಗಳಲ್ಲಿ ನಿರತನಾಗಿರುವುದಾಗಿ ಕಾಣಬಾರದು. ನೀನು ಹಾಗೆ ಮಾಡಿದರೆ, ಅದಕ್ಕೆ ಪ್ರತಿಫಲವಾಗಿ, ಅಲ್ಲಾಹು ನಿನ್ನನ್ನು ಇಹಲೋಕ ಮತ್ತು ಪರಲೋಕದ ಕಷ್ಟಗಳಿಂದ ರಕ್ಷಿಸುತ್ತಾನೆ, ಮತ್ತು ನೀನು ಎಲ್ಲಿಗೆ ಹೋದರೂ ನಿನ್ನ ಪ್ರಮುಖ ವಿಷಯಗಳಲ್ಲಿ ಅವನು ನಿನಗೆ ಸಹಾಯ ಮಾಡುತ್ತಾನೆ. ನೀನು ಏನನ್ನಾದರೂ ಕೇಳಲು ಬಯಸಿದರೆ, ಅಲ್ಲಾಹನಲ್ಲಿ ಹೊರತು ಬೇರೆ ಯಾರಲ್ಲೂ ಕೇಳಬೇಡ, ಏಕೆಂದರೆ ಕೇಳುವವರಿಗೆ ಉತ್ತರಿಸುವವನು ಅವನು ಮಾತ್ರ. ನೀನು ಸಹಾಯವನ್ನು ಬಯಸಿದರೆ, ಅಲ್ಲಾಹನಲ್ಲಿ ಹೊರತು ಬೇರೆ ಯಾರಲ್ಲೂ ಸಹಾಯ ಕೋರಬೇಡ. ಭೂಮಿಯವರೆಲ್ಲರೂ ಒಟ್ಟುಗೂಡಿ ನಿನಗೆ ಪ್ರಯೋಜನ ನೀಡಲು ಬಯಸಿದರೂ, ಅಲ್ಲಾಹು ನಿನಗಾಗಿ ಬರೆದಿಟ್ಟದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಯೋಜನವು ನಿನಗೆ ದೊರಕುವುದಿಲ್ಲ, ಮತ್ತು ಭೂಮಿಯವರೆಲ್ಲರೂ ಒಟ್ಟುಗೂಡಿ ನಿನಗೆ ಹಾನಿ ಮಾಡಲು ಬಯಸಿದರೂ, ಅಲ್ಲಾಹು ನಿನ್ನ ಮೇಲೆ ವಿಧಿಸಿದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಹಾನಿಯು ನಿನಗೆ ಉಂಟಾಗುವುದಿಲ್ಲ ಎಂಬ ದೃಢನಂಬಿಕೆ ನಿನಗಿರಲಿ. ಈ ವಿಷಯವನ್ನು ಸರ್ವಶಕ್ತನಾದ ಅಲ್ಲಾಹು ತನ್ನ ವಿವೇಕ ಮತ್ತು ಜ್ಞಾನಕ್ಕೆ ಅನುಗುಣವಾಗಿ ವಿಧಿಸಿದ್ದಾನೆ ಮತ್ತು ಬರೆದಿದ್ದಾನೆ. ಅಲ್ಲಾಹು ಬರೆದದ್ದಕ್ಕೆ ಯಾವುದೇ ಬದಲಾವಣೆಯಿಲ್ಲ. ಅಲ್ಲಾಹನ ಆದೇಶಗಳನ್ನು ಪಾಲಿಸುವ ಮೂಲಕ ಮತ್ತು ಅವನ ನಿಷೇಧಗಳಿಂದ ದೂರವಿರುವ ಮೂಲಕ ಅವನನ್ನು ರಕ್ಷಿಸುವ ದಾಸನ ಮುಂಭಾಗದಲ್ಲಿ ಅಲ್ಲಾಹು ಇರುತ್ತಾನೆ, ಅವನು ಯಾವ ಸ್ಥಿತಿಯಲ್ಲಿದ್ದಾನೆಂದು ತಿಳಿಯುತ್ತಾನೆ ಮತ್ತು ಅವನಿಗೆ ಸಹಾಯ ಮಾಡುತ್ತಾನೆ ಹಾಗೂ ಬೆಂಬಲ ನೀಡುತ್ತಾನೆ. ಮನುಷ್ಯನು ಸುಖದ ಸಮಯದಲ್ಲಿ ಅಲ್ಲಾಹನಿಗೆ ವಿಧೇಯನಾದರೆ, ಅಲ್ಲಾಹು ಅವನಿಗೆ ಕಷ್ಟದ ಸಮಯದಲ್ಲಿ ಪರಿಹಾರ ಮತ್ತು ಹೊರಬರುವ ದಾರಿಯನ್ನು ತೋರಿಸುತ್ತಾನೆ. ಪ್ರತಿಯೊಬ್ಬ ದಾಸನೂ ಅಲ್ಲಾಹು ತನಗಾಗಿ ವಿಧಿಸಿದ ಒಳಿತು ಮತ್ತು ಕೆಡುಕಿನ ಬಗ್ಗೆ ಸಂತೃಪ್ತನಾಗಿರಲಿ. ಕಷ್ಟಗಳು ಹಾಗೂ ಪರೀಕ್ಷೆಗಳು ಬರುವಾಗ ದಾಸನು ತಾಳ್ಮೆಯಿಂದಿರಬೇಕು. ಏಕೆಂದರೆ ತಾಳ್ಮೆಯು ಪರಿಹಾರದ ಕೀಲಿಕೈಯಾಗಿದೆ. ಸಂಕಷ್ಟವು ತೀವ್ರಗೊಂಡಾಗ ಅಲ್ಲಾಹನ ಕಡೆಯಿಂದ ಪರಿಹಾರ ಬರುತ್ತದೆ, ಮತ್ತು ಕಷ್ಟವು ಸಂಭವಿಸಿದಾಗ ಅಲ್ಲಾಹು ಅದರ ನಂತರ ಸುಲಭವನ್ನು ತರುತ್ತಾನೆ.

ಹದೀಸಿನ ಪ್ರಯೋಜನಗಳು

  1. ಮಕ್ಕಳಿಗೆ ಏಕದೇವಾರಾಧನೆ, ಶಿಷ್ಟಾಚಾರ ಮುಂತಾದ ಧಾರ್ಮಿಕ ವಿಷಯಗಳನ್ನು ಕಲಿಸುವ ಮಹತ್ವವನ್ನು ಈ ಹದೀಸ್ ತಿಳಿಸುತ್ತದೆ.
  2. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.
  3. ಅಲ್ಲಾಹನ ಮೇಲೆ ಅವಲಂಬಿತರಾಗಲು ಮತ್ತು ಅವನ ಮೇಲೆ ಮಾತ್ರ ಭರವಸೆಯಿಡಲು ಈ ಹದೀಸ್ ಆಜ್ಞಾಪಿಸುತ್ತದೆ. ಅವನು ಅತ್ಯುತ್ತಮ ಕಾರ್ಯನಿರ್ವಾಹಕನಾಗಿದ್ದಾನೆ.
  4. ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದಲ್ಲಿ ವಿಶ್ವಾಸವಿಡಬೇಕು ಮತ್ತು ಅದರ ಬಗ್ಗೆ ತೃಪ್ತಿಯನ್ನು ಹೊಂದಿರಬೇಕು ಎಂದು, ಮತ್ತು ಅಲ್ಲಾಹು ಎಲ್ಲಾ ವಿಷಯಗಳನ್ನು ಈಗಾಗಲೇ ನಿರ್ಣಯಿಸಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
  5. ಯಾರು ಅಲ್ಲಾಹನ ಆಜ್ಞೆಗಳನ್ನು ನಿರ್ಲಕ್ಷಿಸುತ್ತಾನೋ, ಅವನನ್ನು ಅಲ್ಲಾಹು ನಿರ್ಲಕ್ಷಿಸುತ್ತಾನೆ. ಅವನು ಅವನ ಸಂರಕ್ಷಣೆಯನ್ನು ವಹಿಸಿಕೊಳ್ಳುವುದಿಲ್ಲ.
  6. ಮನುಷ್ಯನಿಗೆ ಕಷ್ಟ ಬಂದಾಗ, ಅವನು ಸುಲಭವನ್ನು ನಿರೀಕ್ಷಿಸಬೇಕು ಎಂಬ ಮಹಾನ್ ಶುಭವಾರ್ತೆಯನ್ನು ತಿಳಿಸಲಾಗಿದೆ.
  7. "ತಿಳಿದುಕೋ, ಯಾವುದು ನಿನಗೆ ತಗಲಿದೆಯೋ, ಅದು ನಿನ್ನಿಂದ ತಪ್ಪಿಹೋಗುವಂಥದ್ದಾಗಿರಲಿಲ್ಲ. ಮತ್ತು ಯಾವುದು ನಿನಗೆ ತಪ್ಪಿಹೋಗಿದೆಯೋ, ಅದು ನಿನಗೆ ತಗಲುವಂಥದ್ದಾಗಿರಲಿಲ್ಲ." ಈ ಮಾತು ವಿಪತ್ತು ಸಂಭವಿಸಿದಾಗ ಮತ್ತು ಪ್ರಿಯವಾದದ್ದು ತಪ್ಪಿಹೋದಾಗ ದಾಸನಿಗೆ ಸಮಾಧಾನ ನೀಡುತ್ತದೆ. ಮೊದಲ ವಾಕ್ಯವು ಅನಿಷ್ಟಕರವಾದುದು ಸಂಭವಿಸಿದಾಗ ಸಮಾಧಾನ ನೀಡಿದರೆ, ಎರಡನೇ ವಾಕ್ಯವು ಪ್ರಿಯವಾದದ್ದು ತಪ್ಪಿಹೋದಾಗ ಸಮಾಧಾನ ನೀಡುತ್ತದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية الليتوانية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು