عَن أَبي عَبْدِ اللهِ الْجَدَلِيِّ قَالَ: سَأَلْتُ عَائِشَةَ أُمِّ المؤْمنينَ رَضيَ اللهُ عنها عَنْ خُلُقِ رَسُولِ اللهِ صلى الله عليه وسلم فَقَالَتْ:
لَمْ يَكُنْ فَاحِشًا وَلَا مُتَفَحِّشًا وَلَا صَخَّابًا فِي الْأَسْوَاقِ، وَلَا يَجْزِي بِالسَّيِّئَةِ السَّيِّئَةَ وَلَكِنْ يَعْفُو وَيَصْفَحُ.
[صحيح] - [رواه الترمذي وأحمد] - [سنن الترمذي: 2016]
المزيــد ...
ಅಬೂ ಅಬ್ದುಲ್ಲಾ ಅಲ್-ಜದಲಿಯವರು ಹೇಳುತ್ತಾರೆ: ನಾನು ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಲ್ಲಿ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಕೇಳಿದೆನು. ಆಗ ಅವರು ಉತ್ತರಿಸಿದರು:
"ಅವರು (ಪ್ರವಾದಿಯವರು) ಸ್ವಭಾವತಃ ಅಶ್ಲೀಲವಾಗಿರಲಿಲ್ಲ, ಅಥವಾ ಅಶ್ಲೀಲವಾಗಿ ವರ್ತಿಸುವವರಾಗಿರಲಿಲ್ಲ, ಅಥವಾ ಮಾರುಕಟ್ಟೆಗಳಲ್ಲಿ ಗದ್ದಲ ಮಾಡುವವರಾಗಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ, ಬದಲಿಗೆ ಕ್ಷಮಿಸುತ್ತಿದ್ದರು ಮತ್ತು ಕಡೆಗಣಿಸುತ್ತಿದ್ದರು".
[صحيح] - [رواه الترمذي وأحمد] - [سنن الترمذي - 2016]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಕೇಳಲಾಯಿತು. ಆಗ ಅವರು ಹೇಳಿದರು: ಸ್ವಭಾವತಃ ಅವರ ಮಾತುಗಳಲ್ಲಿ ಮತ್ತು ಕಾರ್ಯಗಳಲ್ಲಿ ಅಶ್ಲೀಲತೆ ಮತ್ತು ಅಸಭ್ಯತೆ ಇರಲಿಲ್ಲ. ಅವರು ಅಶ್ಲೀಲವಾಗಿರಲು ತಮ್ಮನ್ನು ಬಲವಂತಪಡಿಸುತ್ತಿರಲಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೂ ಅದನ್ನು ಮಾಡುತ್ತಿರಲಿಲ್ಲ. ಅವರು ಮಾರುಕಟ್ಟೆಗಳಲ್ಲಿ ತಮ್ಮ ಧ್ವನಿಯನ್ನು ಏರಿಸಿ ಕೂಗಾಡುತ್ತಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ; ಬದಲಿಗೆ ಒಳಿತಿನಿಂದ ಪ್ರತಿಕ್ರಿಯಿಸುತ್ತಿದ್ದರು, ಅಂತರಂಗದಲ್ಲಿ ಕ್ಷಮಿಸುತ್ತಿದ್ದರು, ಮತ್ತು ಬಾಹ್ಯವಾಗಿ ಮನ್ನಿಸುತ್ತಿದ್ದರು ಹಾಗೂ ಕಡೆಗಣಿಸುತ್ತಿದ್ದರು.