ಹದೀಸ್‌ಗಳ ಪಟ್ಟಿ

“ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು
عربي ಆಂಗ್ಲ ಉರ್ದು
ಓ ಅಲ್ಲಾಹ್! ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಕಠಿಣವಾಗಿ ವರ್ತಿಸುವವರೊಡನೆ ನೀನು ಕೂಡ ಕಠಿಣವಾಗಿ ವರ್ತಿಸು; ಮತ್ತು ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಮೃದುವಾಗಿ ವರ್ತಿಸುವವರೊಡನೆ ನೀನು ಕೂಡ ಮೃದುವಾಗಿ ವರ್ತಿಸು
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯುತ್ತಮ ನಡವಳಿಕೆಯನ್ನು ಹೊಂದಿದವರಾಗಿದ್ದರು
عربي ಆಂಗ್ಲ ಉರ್ದು
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ
عربي ಆಂಗ್ಲ ಉರ್ದು
ದಜ್ಜಾಲ್‌ನ ಬಗ್ಗೆ ಯಾವುದೇ ಪ್ರವಾದಿಯೂ ಅವರ ಜನತೆಗೆ ತಿಳಿಸಿಕೊಡದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಶ್ಚಯವಾಗಿಯೂ ಅವನು ಒಕ್ಕಣ್ಣನಾಗಿದ್ದಾನೆ. ಅವನು ಸ್ವರ್ಗ ಮತ್ತು ನರಕದಂತಿರುವುದನ್ನು ತನ್ನ ಜೊತೆಗೆ ತರುತ್ತಾನೆ
عربي ಆಂಗ್ಲ ಉರ್ದು
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು ಹೊಂದಿದ್ದರು. ಅವರು ಅವರಿಗೆ ಇಷ್ಟವಿಲ್ಲದ ಏನನ್ನಾದರೂ ನೋಡಿದರೆ, ಅದನ್ನು ಅವರ ಮುಖದಲ್ಲಿ ನಾವು ಗುರುತಿಸುತ್ತಿದ್ದೆವು
عربي ಆಂಗ್ಲ ಉರ್ದು