عَنْ عَائِشَةَ أُمِّ المُؤْمِنينَ رَضِيَ اللَّهُ عَنْهَا أَنَّهَا قَالَتْ:
مَا خُيِّرَ رَسُولُ اللَّهِ صَلَّى اللهُ عَلَيْهِ وَسَلَّمَ بَيْنَ أَمْرَيْنِ إِلَّا أَخَذَ أَيْسَرَهُمَا، مَا لَمْ يَكُنْ إِثْمًا، فَإِنْ كَانَ إِثْمًا كَانَ أَبْعَدَ النَّاسِ مِنْهُ، وَمَا انْتَقَمَ رَسُولُ اللَّهِ صَلَّى اللهُ عَلَيْهِ وَسَلَّمَ لِنَفْسِهِ إِلَّا أَنْ تُنْتَهَكَ حُرْمَةُ اللَّهِ، فَيَنْتَقِمَ لِلَّهِ بِهَا.
[صحيح] - [متفق عليه] - [صحيح البخاري: 3560]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ನಡುವೆ ಆಯ್ಕೆ ನೀಡಲಾದಾಗ, ಅವರು ಯಾವಾಗಲೂ ಸುಲಭವಾದದ್ದನ್ನು ಆರಿಸಿಕೊಳ್ಳುತ್ತಿದ್ದರು, ಅದು ಪಾಪವಲ್ಲದಿದ್ದರೆ ಮಾತ್ರ. ಒಂದು ವೇಳೆ ಅದು ಪಾಪವಾಗಿದ್ದರೆ, ಅವರು ಎಲ್ಲರಿಗಿಂತ ಮೊದಲು ಅದರಿಂದ ದೂರವಾಗಿರುತ್ತಿದ್ದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸ್ವಂತಕ್ಕಾಗಿ ಎಂದಿಗೂ ಪ್ರತೀಕಾರ ತೀರಿಸಿಕೊಂಡಿರಲಿಲ್ಲ, ಆದರೆ ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಿದಾಗ ಹೊರತು. ಆಗ ಅವರು ಅಲ್ಲಾಹನಿಗಾಗಿ ಪ್ರತೀಕಾರ ತೀರಿಸುತ್ತಿದ್ದರು."
[صحيح] - [متفق عليه] - [صحيح البخاري - 3560]
ಉಮ್ಮುಲ್ ಮುಅಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಗುಣಗಳನ್ನು ತಿಳಿಸಿದ್ದಾರೆ. ಅವು ಯಾವುದೆಂದರೆ: ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ನಡುವೆ ಆಯ್ಕೆ ನೀಡಿದಾಗ, ಅವರು ಸುಲಭವಾದದ್ದನ್ನೇ ಆರಿಸಿಕೊಳ್ಳುತ್ತಿದ್ದರು. ಆದರೆ ಅದು ಪಾಪಕ್ಕೆ ಕಾರಣವಾಗದಿದ್ದರೆ ಮಾತ್ರ. ಒಂದು ವೇಳೆ ಸುಲಭವಾದದ್ದು ಪಾಪಕ್ಕೆ ಕಾರಣವಾದರೆ, ಅವರು ಎಲ್ಲರಿಗಿಂತ ಮೊದಲು ಅದರಿಂದ ದೂರವಾಗಿರುತ್ತಿದ್ದರು ಮತ್ತು ಕಠಿಣವಾದದ್ದನ್ನು ಆಯ್ಕೆ ಮಾಡುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸ್ವಂತಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ತಮ್ಮ ವಿಷಯದಲ್ಲಿ ಜನರನ್ನು ಕ್ಷಮಿಸುತ್ತಿದ್ದರು ಮತ್ತು ಮನ್ನಿಸುತ್ತಿದ್ದರು. ಆದರೆ ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಲಾದಾಗ, ಅವರು ಅಲ್ಲಾಹನಿಗಾಗಿ ಪ್ರತೀಕಾರ ತೀರಿಸುತ್ತಿದ್ದರು. ಅವರು ಅಲ್ಲಾಹನಿಗಾಗಿ ಅತಿಯಾಗಿ ಕೋಪಗೊಳ್ಳುತ್ತಿದ್ದರು.