عَنِ ابْنِ عَبَّاسٍ رَضِيَ اللهُ عَنْهُمَا قَالَ:
أُنْزِلَ عَلَى رَسُولِ اللهِ صَلَّى اللهُ عَلَيْهِ وَسَلَّمَ وَهُوَ ابْنُ أَرْبَعِينَ، فَمَكَثَ بِمَكَّةَ ثَلَاثَ عَشْرَةَ سَنَةً، ثُمَّ أُمِرَ بِالْهِجْرَةِ، فَهَاجَرَ إِلَى الْمَدِينَةِ، فَمَكَثَ بِهَا عَشْرَ سِنِينَ، ثُمَّ تُوُفِّيَ صَلَّى اللهُ عَلَيْهِ وَسَلَّمَ.
[صحيح] - [متفق عليه] - [صحيح البخاري: 3851]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಲ್ವತ್ತು ವರ್ಷ ಪ್ರಾಯವಾದಾಗ ಅವರಿಗೆ ಕುರ್‌ಆನ್ ಅವತೀರ್ಣವು ಆರಂಭವಾಯಿತು. ಅವರು ಮಕ್ಕಾದಲ್ಲಿ ಹದಿಮೂರು ವರ್ಷ ತಂಗಿದರು. ನಂತರ ಅವರಿಗೆ ಹಿಜ್ರ (ವಲಸೆ) ಮಾಡಲು ಆದೇಶ ಬಂತು. ಅವರು ಮದೀನಕ್ಕೆ ಹಿಜ್ರ ಮಾಡಿದರು. ಅಲ್ಲಿ ಅವರು ಹತ್ತು ವರ್ಷ ತಂಗಿದರು. ನಂತರ ಅವರು ನಿಧನರಾದರು."
[صحيح] - [متفق عليه] - [صحيح البخاري - 3851]
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ: ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಲ್ವತ್ತು ವರ್ಷ ಪ್ರಾಯವಾದಾಗ ಅವರಿಗೆ ಕುರ್‌ಆನ್ ಅವತೀರ್ಣವು ಪ್ರಾರಂಭವಾಗಿ ಅವರು ಪ್ರವಾದಿಯಾದರು. ಪ್ರವಾದಿಯಾದ ಬಳಿಕ ಹದಿಮೂರು ವರ್ಷ ಅವರ ಮಕ್ಕಾದಲ್ಲಿ ತಂಗಿದ್ದರು. ನಂತರ ಅವರಿಗೆ ಮದೀನಕ್ಕೆ ಹಿಜ್ರ ಮಾಡಲು ಆದೇಶಿಸಲಾಯಿತು. ಅಲ್ಲಿ ಅವರು ಹತ್ತು ವರ್ಷ ತಂಗಿದರು. ನಂತರ ಅವರು ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.