+ -

عن عبدِ الله بن عمرو رضي الله عنهما قال:
كنتُ أكتبُ كلَّ شيءٍ أسمعُه من رسولِ الله صلَّى الله عليه وسلم أُريدُ حفْظَه، فنهتْني قريشٌ، وقالوا: أتكْتبُ كلَّ شيءٍ تَسمَعُه من رسول الله صلَّى الله عليه وسلم، ورسولُ الله صلَّى الله عليه وسلم بَشَرٌ يتكلَّمُ في الغضَبِ والرِّضا؟ فأمسَكتُ عن الكتاب، فذكرتُ ذلك لرسول الله صلَّى الله عليه وسلم، فأومأ بإصبَعِه إلى فيه، فقال: «اكتُبْ، فوالذي نفسي بيدِه، ما يَخرُجُ منه إلا حقٌّ».

[صحيح] - [رواه أبو داود] - [سنن أبي داود: 3646]
المزيــد ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುವ ಎಲ್ಲವನ್ನೂ, ಅವುಗಳನ್ನು ಕಂಠಪಾಠ ಮಾಡುವುದಕ್ಕಾಗಿ ಬರೆದಿಡುತ್ತಿದ್ದೆ. ಆಗ ಕೆಲವು ಕುರೈಷರು ನನ್ನನ್ನು ತಡೆಯುತ್ತಾ ಹೇಳಿದರು: "ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುವ ಎಲ್ಲವನ್ನೂ ನೀವು ಬರೆದಿಡುತ್ತೀರಾ? ವಾಸ್ತವವಾಗಿ, ಅವರು ಕೋಪದಲ್ಲಿರುವಾಗಲೂ, ರಾಜಿಯಲ್ಲಿರುವಾಗಲೂ ಮಾತನಾಡುವ ಒಬ್ಬ ಮನುಷ್ಯರಲ್ಲವೇ?" ಆದ್ದರಿಂದ, ನಾನು ಬರೆಯುವುದನ್ನು ಬಿಟ್ಟುಬಿಟ್ಟೆ. ನಂತರ ನಾನು ಈ ವಿಷಯವನ್ನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನಕ್ಕೆ ತಂದಾಗ ಅವರು ತಮ್ಮ ಬೆರಳಿನಿಂದ ಬಾಯಿಯನ್ನು ತೋರಿಸುತ್ತಾ ಹೇಳಿದರು: "ತಾವು ಬರೆಯಿರಿ. ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಇದರಿಂದ ಸತ್ಯವಲ್ಲದೆ ಬೇರೇನೂ ಹೊರಬರುವುದಿಲ್ಲ."

[صحيح] - [رواه أبو داود] - [سنن أبي داود - 3646]

ವಿವರಣೆ

ಅಬ್ದುಲ್ಲಾಹ್ ಬಿನ್ ಅಮ್ರ್ (ರ) ಹೇಳುತ್ತಾರೆ: "ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುವ ಎಲ್ಲವನ್ನೂ, ಅವುಗಳನ್ನು ಕಂಠಪಾಠ ಮಾಡುವುದಕ್ಕಾಗಿ ಬರೆದಿಡುತ್ತಿದ್ದೆ. ಆದರೆ ಕೆಲವು ಕುರೈಷರು ನನ್ನನ್ನು ತಡೆಯುತ್ತಾ ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನುಷ್ಯರಾಗಿದ್ದು ಅವರು ಕೋಪದಲ್ಲಿರುವಾಗಲೂ, ರಾಜಿಯಲ್ಲಿರುವಾಗಲೂ ಮಾತನಾಡುತ್ತಾರೆ. ಅವರಿಂದ ತಪ್ಪು ಸಂಭವಿಸಲೂಬಹುದು." ಇದನ್ನು ಕೇಳಿ ನಾನು ಬರೆಯುವುದನ್ನು ಬಿಟ್ಟುಬಿಟ್ಟೆ.
ನಂತರ ನಾನು ಅವರು ಹೇಳಿದ್ದನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನಕ್ಕೆ ತಂದಾಗ, ಅವರು ತಮ್ಮ ಬೆರಳಿನಿಂದ ಬಾಯಿಯನ್ನು ತೋರಿಸುತ್ತಾ ಹೇಳಿದರು: "ತಾವು ಬರೆಯಿರಿ. ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಕೋಪ, ರಾಜಿ ಮುಂತಾದ ಯಾವುದೇ ಸಂದರ್ಭದಲ್ಲೂ ಇದರಿಂದ ಸತ್ಯವಲ್ಲದೆ ಬೇರೇನೂ ಹೊರಬರುವುದಿಲ್ಲ."
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಅಲ್ಲಾಹು ಹೇಳುತ್ತಾನೆ: "ಅವರು ಮನಬಂದಂತೆ ಮಾತನಾಡುವುದಿಲ್ಲ. ಅದು (ಅವರ ಮಾತು) ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ." [ಅನ್ನಜ್ಮ್: 3-4]

ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಉಯ್ಘರ್ ಬಂಗಾಳಿ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الإيطالية الأورومو الولوف الأذربيجانية الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಕೋಪದಲ್ಲಾಗಲಿ, ರಾಜಿಯಲ್ಲಾಗಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ಏನೆಲ್ಲಾ ತಲುಪಿಸಿಕೊಡುತ್ತಾರೋ ಅವೆಲ್ಲವೂ ತಪ್ಪುಗಳಿಂದ ಸುರಕ್ಷಿತವಾಗಿವೆ.
  2. ಪ್ರವಾದಿಚರ್ಯೆಯನ್ನು ಸಂರಕ್ಷಿಸಲು ಮತ್ತು ಇತರರಿಗೆ ತಲುಪಿಸಿಕೊಡಲು ಸಹಾಬಿಗಳು ತೋರುತ್ತಿದ್ದ ಉತ್ಸಾಹವನ್ನು ತಿಳಿಸಲಾಗಿದೆ.
  3. ವಿಷಯವನ್ನು ದೃಢೀಕರಿಸುವುದು ಮುಂತಾದ ಉತ್ತಮ ಉದ್ದೇಶಕ್ಕಾಗಿ ಆಣೆ ಮಾಡಬಹುದು.
  4. ಜ್ಞಾನವನ್ನು ಸಂರಕ್ಷಿಸುವ ಅತ್ಯುತ್ತಮ ವಿಧಾನ ಅದನ್ನು ಬರೆದಿಡುವುದಾಗಿದೆ.
ಇನ್ನಷ್ಟು