عَنْ سَمُرَةَ بْنِ جُنْدَبٍ وَالْمُغِيرَةِ بْنِ شُعْبَةَ رضي الله عنهما قَالَا: قَالَ رَسُولُ اللهِ صَلَّى اللهُ عَلَيْهِ وَسَلَّمَ:
«مَنْ حَدَّثَ عَنِّي بِحَدِيثٍ يُرَى أَنَّهُ كَذِبٌ، فَهُوَ أَحَدُ الْكَاذِبِينَ».
[صحيح] - [رواه مسلم في مقدمته]
المزيــد ...
ಸಮುರ ಬಿನ್ ಜುಂದುಬ್ ಮತ್ತು ಮುಗೀರ ಬಿನ್ ಶುಅ್‌ಬ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರಿಬ್ಬರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ."
[صحيح] - - [صحيح مسلم]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಾದರೂ ಸುಳ್ಳು ಎಂದು ತಿಳಿದಿರುವ, ಅಥವಾ ಸುಳ್ಳು ಎಂದು ಭಾವಿಸುವ, ಅಥವಾ ಸುಳ್ಳು ಎಂದು ಖಾತ್ರಿಯಿರುವ ಒಂದು ಹದೀಸನ್ನು ಅವರ ಹೆಸರಲ್ಲಿ ವರದಿ ಮಾಡಿದರೆ, ಅದನ್ನು ಮೊದಲು ವರದಿ ಮಾಡಿದವನ ಸುಳ್ಳುಗಾರಿಕೆಯಲ್ಲಿ ಇವನೂ ಭಾಗಿಯಾಗುತ್ತಾನೆ.