عَنْ بُسْرِ بْنِ سَعِيدٍ، أَنَّ زَيْدَ بْنَ خَالِدٍ الْجُهَنِيَّ رَضيَ اللهُ عنه، أَرْسَلَهُ إِلَى أَبِي جُهَيْمٍ رَضيَ اللهُ عنه، يَسْأَلُهُ مَاذَا سَمِعَ مِنْ رَسُولِ اللهِ صَلَّى اللهُ عَلَيْهِ وَسَلَّمَ فِي الْمَارِّ بَيْنَ يَدَيِ الْمُصَلِّي؟ قَالَ أَبُو جُهَيْمٍ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَوْ يَعْلَمُ الْمَارُّ بَيْنَ يَدَيِ الْمُصَلِّي مَاذَا عَلَيْهِ لَكَانَ أَنْ يَقِفَ أَرْبَعِينَ خَيْرًا لَهُ مِنْ أَنْ يَمُرَّ بَيْنَ يَدَيْهِ» قَالَ أَبُو النَّضْرِ: لَا أَدْرِي قَالَ: أَرْبَعِينَ يَوْمًا أَوْ شَهْرًا أَوْ سَنَةً؟
[صحيح] - [متفق عليه] - [صحيح مسلم: 507]
المزيــد ...
ಬುಸ್ರ್ ಇಬ್ನ್ ಸಈದ್ ರಿಂದ ವರದಿ: ಝೈದ್ ಇಬ್ನ್ ಖಾಲಿದ್ ಅಲ್-ಜುಹನೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ನಮಾಝ್ ಮಾಡುವವನ ಮುಂದೆ ಹಾದುಹೋಗುವ ಬಗ್ಗೆ ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಕೇಳಿದ್ದೀರಿ ಎಂದು ಕೇಳಲು, ಅವರನ್ನು (ಬುಸ್ರ್ ಅವರನ್ನು) ಅಬೂ ಜುಹೈಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಬಳಿಗೆ ಕಳುಹಿಸಿದರು. ಅಬೂ ಜುಹೈಮ್ ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು". (ಉಪ-ವರದಿಗಾರ) ಅಬು ನ್ನದ್ರ್ ಹೇಳಿದರು: "ಅವರು (ಪ್ರವಾದಿ) ನಲವತ್ತು ದಿನಗಳೆಂದರೋ, ಅಥವಾ ತಿಂಗಳುಗಳೆಂದರೋ, ಅಥವಾ ವರ್ಷಗಳೆಂದರೋ ನನಗೆ ತಿಳಿದಿಲ್ಲ."
[صحيح] - [متفق عليه] - [صحيح مسلم - 507]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯ (ಫರ್ಝ್) ಅಥವಾ ಐಚ್ಛಿಕ (ನಫಿಲ್) ನಮಾಝ್ ಮಾಡುವವನ ಮುಂದೆ ಹಾದುಹೋಗುವುದರ ಬಗ್ಗೆ ಎಚ್ಚರಿಸಿದ್ದಾರೆ. ಮತ್ತು ಉದ್ದೇಶಪೂರ್ವಕವಾಗಿ ಹಾಗೆ ಮಾಡುವವನಿಗೆ, ತನಗೆ ಉಂಟಾಗುವ ಪಾಪದ ಬಗ್ಗೆ ತಿಳಿದಿದ್ದರೆ; ಅವನು ನಲವತ್ತು (ದಿನ/ತಿಂಗಳು/ವರ್ಷ) ನಿಲ್ಲಲು ಆಯ್ಕೆ ಮಾಡುತ್ತಿದ್ದನು. ಅದು ಅವನ ಮುಂದೆ ಹಾದುಹೋಗುವುದಕ್ಕಿಂತ ಅವನಿಗೆ ಉತ್ತಮವಾಗಿರುತ್ತಿತ್ತು. ಹದೀಸ್‌ನ ವರದಿಗಾರ ಅಬು ನ್ನದ್ರ್ ಹೇಳಿದರು: ಅವರು ನಲವತ್ತು ದಿನಗಳೆಂದರೋ, ಅಥವಾ ತಿಂಗಳುಗಳೆಂದರೋ, ಅಥವಾ ವರ್ಷಗಳೆಂದರೋ ನನಗೆ ತಿಳಿದಿಲ್ಲ.