عن عبد الله بن عمرو رضي الله عنهما أن النبي صلى الله عليه وسلم قال:
«بَلِّغُوا عَنِّي وَلَوْ آيَةً، وَحَدِّثُوا عَنْ بَنِي إِسْرَائِيلَ وَلَا حَرَجَ، وَمَنْ كَذَبَ عَلَيَّ مُتَعَمِّدًا فَلْيَتَبَوَّأْ مَقْعَدَهُ مِنَ النَّارِ».
[صحيح] - [رواه البخاري] - [صحيح البخاري: 3461]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”
[صحيح] - [رواه البخاري] - [صحيح البخاري - 3461]
ಕುರ್‌ಆನ್ ಮತ್ತು ಸುನ್ನತ್ತಿನಿಂದ ಏನಾದರೂ ಜ್ಞಾನವನ್ನು ತಲುಪಿಸಿಕೊಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಅದು ಒಂದೇ ಒಂದು ಸೂಕ್ತಿ ಅಥವಾ ಹದೀಸ್ ಆಗಿದ್ದರೂ ಪರವಾಗಿಲ್ಲ. ಆದರೆ ತಾನು ತಲುಪಿಸುವ ಆ ಸೂಕ್ತಿ ಅಥವಾ ಹದೀಸಿನ ಬಗ್ಗೆ ಸ್ಪಷ್ಟ ಜ್ಞಾನವಿರಬೇಕಾದ ಅಗತ್ಯವಿದೆ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ಇಸ್ರಾಯೀಲರಿಂದ , ಅವರಿಗೆ ಸಂಭವಿಸಿದ ಕೆಲವು ಘಟನೆಗಳನ್ನು, ಅವು ನಮ್ಮ ಧರ್ಮಸಂಹಿತೆಗೆ (ಶರಿಯತ್) ವಿರುದ್ಧವಾಗಿರದಿದ್ದರೆ ಉಲ್ಲೇಖಿಸುವುದರಲ್ಲಿ ತೊಂದರೆಯಿಲ್ಲವೆಂದು ವಿವರಿಸಿದ್ದಾರೆ. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೆಸರಲ್ಲಿ ಸುಳ್ಳು ಹೇಳುವುದರ ಬಗ್ಗೆ ಎಚ್ಚರಿಸಿದ್ದಾರೆ. ಅವರ ಬಗ್ಗೆ ಯಾರಾದರೂ ಉದ್ದೇಶಪೂರ್ವಕ ಸುಳ್ಳು ಹೇಳಿದರೆ, ಅವನು ನರಕದಲ್ಲಿ ತನ್ನ ಆಸನವನ್ನು, ಅಂದರೆ ಅವನ ವಾಸಸ್ಥಳವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾನೆ.