عَنْ أَبِي هُرَيْرَةَ عَنْ رَسُولِ اللهِ صَلَّى اللهُ عَلَيْهِ وَسَلَّمَ أَنَّهُ قَالَ:
«سَيَكُونُ فِي آخِرِ أُمَّتِي أُنَاسٌ يُحَدِّثُونَكُمْ مَا لَمْ تَسْمَعُوا أَنْتُمْ وَلَا آبَاؤُكُمْ، فَإِيَّاكُمْ وَإِيَّاهُمْ».
[صحيح] - [رواه مسلم] - [صحيح مسلم: 6]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕೊನೆಯ ಕಾಲದಲ್ಲಿ ಕೆಲವು ಜನರು ಬರುವರು. ಅವರು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಕೇಳದೇ ಇರುವುದನ್ನು ನಿಮಗೆ ಹೇಳುವರು. ಆದ್ದರಿಂದ ನೀವು ಅವರಿಂದ ದೂರವಿರಿ."
[صحيح] - [رواه مسلم] - [صحيح مسلم - 6]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಸಮುದಾಯದ ಕೊನೆಯ ಕಾಲದಲ್ಲಿ ಕೆಲವು ಜನರು ಪ್ರತ್ಯಕ್ಷರಾಗುವರು. ಅವರು ಕಪೋಕಲ್ಪಿತ ಮಾತುಗಳನ್ನು ಹೇಳುವರು. ನಿಮಗಿಂತ ಮೊದಲು ಯಾರೂ ಹೇಳದೇ ಇರುವ ಮಾತುಗಳನ್ನು ಹೇಳುವರು. ಅವರು ಸುಳ್ಳು ಸುಳ್ಳಾಗಿ ರಚಿಸಿದ ಹದೀಸ್‌ಗಳನ್ನು ಹೇಳುವರು. ಆದ್ದರಿಂದ ನಾವು ಅವರಿಂದ ದೂರವಿದ್ದು ಅವರ ಸಹವಾಸವನ್ನು ಬಿಟ್ಟುಬಿಡಬೇಕು ಮತ್ತು ಅವರು ಹೇಳುವ ಹದೀಸ್‌ಗಳಿಗೆ ಕಿವಿಗೊಡಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಇದೇಕೆಂದರೆ ಆ ಕೃತಕ ಹದೀಸ್‌ಗಳು ನಮ್ಮ ಹೃದಯದಲ್ಲಿ ಅಚ್ಚೊತ್ತಿ ನಾವು ಅದರಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬಹುದು.