عَنْ أَبِي هُرَيْرَةَ رَضِيَ اللَّهُ عَنْهُ:
أَنَّ أَعْرَابِيًّا أَتَى النَّبِيَّ صَلَّى اللهُ عَلَيْهِ وَسَلَّمَ، فَقَالَ: دُلَّنِي عَلَى عَمَلٍ إِذَا عَمِلْتُهُ دَخَلْتُ الجَنَّةَ، قَالَ: «تَعْبُدُ اللَّهَ لاَ تُشْرِكُ بِهِ شَيْئًا، وَتُقِيمُ الصَّلاَةَ المَكْتُوبَةَ، وَتُؤَدِّي الزَّكَاةَ المَفْرُوضَةَ، وَتَصُومُ رَمَضَانَ» قَالَ: وَالَّذِي نَفْسِي بِيَدِهِ لاَ أَزِيدُ عَلَى هَذَا، فَلَمَّا وَلَّى قَالَ النَّبِيُّ صَلَّى اللهُ عَلَيْهِ وَسَلَّمَ: «مَنْ سَرَّهُ أَنْ يَنْظُرَ إِلَى رَجُلٍ مِنْ أَهْلِ الجَنَّةِ، فَلْيَنْظُرْ إِلَى هَذَا».
[صحيح] - [متفق عليه] - [صحيح البخاري: 1397]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಬ್ಬ ಅಲೆಮಾರಿ ಅರಬ್ಬನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದನು: "ನಾನು ಆ ಕಾರ್ಯವನ್ನು ಮಾಡಿದರೆ ಸ್ವರ್ಗವನ್ನು ಪ್ರವೇಶಿಸುವಂತಹ ಒಂದು ಕಾರ್ಯದ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ಕಡ್ಡಾಯ ನಮಾಝನ್ನು ಸಂಸ್ಥಾಪಿಸು, ಕಡ್ಡಾಯ ಝಕಾತನ್ನು ನೀಡು, ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸು." ಅವನು ಹೇಳಿದನು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ." ಅವನು ತಿರುಗಿ ಹೋದ ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗವಾಸಿಗಳಲ್ಲಿ ಸೇರಿದ ವ್ಯಕ್ತಿಯನ್ನು ನೋಡಲು ಸಂತೋಷಪಡುವವರು ಇವನನ್ನು ನೋಡಲಿ."
[صحيح] - [متفق عليه] - [صحيح البخاري - 1397]
ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸುವ ಒಂದು ಕರ್ಮದ ಬಗ್ಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ಉತ್ತರಿಸಿದ್ದೇನೆಂದರೆ, ಸ್ವರ್ಗ ಪ್ರವೇಶ ಮತ್ತು ನರಕ ವಿಮೋಚನೆಯು ಇಸ್ಲಾಮಿನ ಸ್ತಂಭಗಳನ್ನು ನಿರ್ವಹಿಸುವುದರ ಮೇಲೆ ಅವಲಂಬಿತವಾಗಿದೆ. ಅಂದರೆ, ಅಲ್ಲಾಹನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವುದು. ಎಲ್ಲಾ ದಿನ ರಾತ್ರಿಗಳಲ್ಲಿ ಅಲ್ಲಾಹು ತನ್ನ ದಾಸರ ಮೇಲೆ ಕಡ್ಡಾಯಗೊಳಿಸಿದ ಐದು ವೇಳೆಯ ನಮಾಝ್‌ಗಳನ್ನು ಸಂಸ್ಥಾಪಿಸುವುದು. ಅಲ್ಲಾಹು ನಿನಗೆ ಕಡ್ಡಾಯಗೊಳಿಸಿದ ಸಂಪತ್ತಿನ ಝಕಾತನ್ನು ಅದರ ಹಕ್ಕುದಾರರಿಗೆ ನೀಡುವುದು. ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸುವುದು. ಆಗ ಆ ವ್ಯಕ್ತಿ ಹೇಳಿದನು: ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನೀವು ನನಗೆ ತಿಳಿಸಿಕೊಟ್ಟ ಈ ಕಡ್ಡಾಯ ಆರಾಧನೆಗಳಿಗಿಂತ ಹೆಚ್ಚಿಗೆ ನಾನೇನೂ ನಿರ್ವಹಿಸುವುದಿಲ್ಲ ಮತ್ತು ಇದರಲ್ಲಿ ಕಡಿತವನ್ನೂ ಮಾಡುವುದಿಲ್ಲ. ಆತ ಹಿಂದಿರುಗಿ ಹೋದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸ್ವರ್ಗವಾಸಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ನೋಡಲು ಸಂತೋಷಪಡುವವರು ಈ ಅಲೆಮಾರಿ ಅರಬ್ಬನನ್ನು ನೋಡಲಿ.