عَنْ طَلْحَةَ بْنِ عُبَيْدِ اللهِ رضي الله عنه قَالَ:
جَاءَ رَجُلٌ إِلَى رَسُولِ اللهِ صَلَّى اللهُ عَلَيْهِ وَسَلَّمَ مِنْ أَهْلِ نَجْدٍ ثَائِرُ الرَّأْسِ، نَسْمَعُ دَوِيَّ صَوْتِهِ، وَلَا نَفْقَهُ مَا يَقُولُ حَتَّى دَنَا مِنْ رَسُولِ اللهِ صَلَّى اللهُ عَلَيْهِ وَسَلَّمَ، فَإِذَا هُوَ يَسْأَلُ عَنِ الْإِسْلَامِ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «خَمْسُ صَلَوَاتٍ فِي الْيَوْمِ وَاللَّيْلَةِ» فَقَالَ: هَلْ عَلَيَّ غَيْرُهُنَّ؟ قَالَ: «لَا، إِلَّا أَنْ تَطَّوَّعَ، وَصِيَامُ شَهْرِ رَمَضَانَ»، فَقَالَ: هَلْ عَلَيَّ غَيْرُهُ؟ فَقَالَ: «لَا، إِلَّا أَنْ تَطَّوَّعَ»، وَذَكَرَ لَهُ رَسُولُ اللهِ صَلَّى اللهُ عَلَيْهِ وَسَلَّمَ الزَّكَاةَ، فَقَالَ: هَلْ عَلَيَّ غَيْرُهَا؟ قَالَ: «لَا، إِلَّا أَنْ تَطَّوَّعَ»، قَالَ: فَأَدْبَرَ الرَّجُلُ، وَهُوَ يَقُولُ: وَاللهِ، لَا أَزِيدُ عَلَى هَذَا، وَلَا أَنْقُصُ مِنْهُ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «أَفْلَحَ إِنْ صَدَقَ».
[صحيح] - [متفق عليه] - [صحيح مسلم: 11]
المزيــد ...
ತಲ್ಹ ಬಿನ್ ಉಬೈದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಮ್ಮೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ನಜ್ದ್ ಕಡೆಯಿಂದ, ಕೆದರಿದ ಕೂದಲಿನ ಒಬ್ಬ ವ್ಯಕ್ತಿ ಬಂದನು. ನಮಗೆ ಅವನ ದೊಡ್ಡ ಸ್ವರ ಕೇಳಿಸುತ್ತಿತ್ತು, ಆದರೆ ಅವನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೀಪಕ್ಕೆ ಬರುವ ತನಕ ಅವನು ಏನು ಹೇಳುತ್ತಿದ್ದಾನೆಂದು ನಮಗೆ ಅರ್ಥವಾಗುತ್ತಿರಲಿಲ್ಲ. ನಂತರ ಅವನು ಇಸ್ಲಾಂ ಧರ್ಮದ ಬಗ್ಗೆ ಕೇಳುತ್ತಿದ್ದಾನೆಂದು ತಿಳಿಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಂದು ದಿನ-ರಾತ್ರಿಯಲ್ಲಿ ಐದು ವೇಳೆ ನಮಾಝ್ ನಿರ್ವಹಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು. ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು." ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝಕಾತ್‌ನ ಬಗ್ಗೆ ತಿಳಿಸಿದರು. ಆ ವ್ಯಕ್ತಿ ಕೇಳಿದನು: "ನಾನು ಇದಲ್ಲದೆ ಬೇರೇನಾದರೂ ನಿರ್ವಹಿಸಬೇಕೇ?" ಅವರು ಉತ್ತರಿಸಿದರು: "ಬೇಡ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಕರ್ಮಗಳ ಹೊರತು." ಆ ವ್ಯಕ್ತಿ ಹಿಂದಿರುಗಿ ಹೋಗುತ್ತಾ ಹೇಳತೊಡಗಿದನು: "ಅಲ್ಲಾಹನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ ಮತ್ತು ಇದರಲ್ಲಿ ಏನೂ ಕಡಿಮೆ ಮಾಡುವುದಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಹೇಳಿದ್ದು ಸತ್ಯವಾಗಿದ್ದರೆ ಅವನು ಯಶಸ್ವಿಯಾದನು."
[صحيح] - [متفق عليه] - [صحيح مسلم - 11]
ನಜ್ದ್ ಕಡೆಯಿಂದ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದನು. ಅವನು ಕೆದರಿದ ಕೂದಲು ಮತ್ತು ದೊಡ್ಡ ಸ್ವರವನ್ನು ಹೊಂದಿದ್ದನು. ಅವನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮೀಪಕ್ಕೆ ಬಂದು ಇಸ್ಲಾಂ ಧರ್ಮದ ಕಡ್ಡಾಯ ಕಾರ್ಯಗಳ ಬಗ್ಗೆ ಕೇಳುವ ತನಕ ಅವನು ಏನು ಮಾತನಾಡುತ್ತಿದ್ದಾನೆಂದೇ ನಮಗೆ ಅರ್ಥವಾಗುತ್ತಿರಲಿಲ್ಲ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಿಂದ ಆರಂಭಿಸಿ, ಅಲ್ಲಾಹು ಅವನ ಮೇಲೆ ಪ್ರತಿ ದಿನ-ರಾತ್ರಿ ಐದು ವೇಳೆಯ ನಮಾಝನ್ನು ಕಡ್ಡಾಯಗೊಳಿಸಿದ್ದಾನೆಂದು ತಿಳಿಸಿದರು.
ಆ ವ್ಯಕ್ತಿ ಕೇಳಿದನು: ಈ ಐದು ನಮಾಝ್‌ಗಳ ಹೊರತು ಬೇರೆ ಯಾವುದಾದರೂ ನಮಾಝ್ ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಐಚ್ಛಿಕ ನಮಾಝ್‌ಗಳನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಹೊರತು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದನ್ನು ಕೂಡ ಅಲ್ಲಾಹು ನಿನಗೆ ಕಡ್ಡಾಯಗೊಳಿಸಿದ್ದಾನೆ.
ಆ ವ್ಯಕ್ತಿ ಕೇಳಿದನು: ರಮದಾನ್ ತಿಂಗಳ ಉಪವಾಸದ ಹೊರತು ಬೇರೆ ಯಾವುದಾದರೂ ಉಪವಾಸವು ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ಉಪವಾಸಗಳ ಹೊರತು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝಕಾತ್‌ನ ಬಗ್ಗೆ ತಿಳಿಸಿದರು.
ಆ ವ್ಯಕ್ತಿ ಕೇಳಿದನು: ಕಡ್ಡಾಯ ಝಕಾತಿನ ಹೊರತು ಬೇರೆ ಯಾವುದಾದರೂ ದಾನ-ಧರ್ಮವು ನನಗೆ ಕಡ್ಡಾಯವಾಗಿದೆಯೇ?
ಅವರು ಉತ್ತರಿಸಿದರು: ಇಲ್ಲ, ಆದರೆ ನೀನು ಸ್ವಯಂಪ್ರೇರಿತವಾಗಿ ನಿರ್ವಹಿಸುವ ದಾನ-ಧರ್ಮದ ಹೊರತು.
ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯ ಕರ್ಮಗಳ ಬಗ್ಗೆ ತಿಳಿದುಕೊಂಡ ಬಳಿಕ ಆ ವ್ಯಕ್ತಿ ಹಿಂದಿರುಗಿ ಹೋಗುವಾಗ, ಯಾವುದೇ ಹೆಚ್ಚುವರಿ ಅಥವಾ ಕಡಿತ ಮಾಡದೆ ಈ ಎಲ್ಲಾ ಕಾರ್ಯಗಳನ್ನು ಚಾಚೂತಪ್ಪದೆ ನಿರ್ವಹಿಸುತ್ತೇನೆಂದು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳಿದನು. ಆತ ಹೇಳಿ ಮುಗಿಸುತ್ತಿದ್ದಂತೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಆ ವ್ಯಕ್ತಿ ತಾನು ಆಣೆ ಮಾಡಿದ್ದನ್ನು ಸತ್ಯವೆಂದು ಸಾಬೀತುಪಡಿಸಿದರೆ ಆತ ಖಂಡಿತ ಯಶಸ್ವಿಯಾಗುತ್ತಾನೆ.