عَنْ أَبِي سَعِيدٍ الْخُدْرِيِّ وَعَنْ أَبِي هُرَيْرَةَ رضي الله عنهما عَنِ النَّبِيِّ صلى الله عليه وسلم قَالَ:
«مَا يُصِيبُ الْمُسْلِمَ مِنْ نَصَبٍ وَلَا وَصَبٍ وَلَا هَمٍّ وَلَا حُزْنٍ وَلَا أَذًى وَلَا غَمٍّ حَتَّى الشَّوْكَةِ يُشَاكُهَا إِلَّا كَفَّرَ اللهُ بِهَا مِنْ خَطَايَاهُ».
[صحيح] - [متفق عليه] - [صحيح البخاري: 5641]
المزيــد ...
ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”
[صحيح] - [متفق عليه] - [صحيح البخاري - 5641]
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮುಸಲ್ಮಾನರಿಗೆ ಸಂಭವಿಸುವ ರೋಗಗಳು, ಚಿಂತೆಗಳು, ದುಃಖಗಳು, ಕಷ್ಟಗಳು ಮತ್ತು ತೊಂದರೆಗಳು—ಅದು ಕೇವಲ ಮುಳ್ಳು ಚುಚ್ಚಿ ಉಂಟಾಗುವ ನೋವಾದರೂ ಸಹ—ಅವು ಅವರ ಪಾಪಗಳನ್ನು ಪರಿಹರಿಸುತ್ತವೆ ಮತ್ತು ಅವರ ದುಷ್ಕೃತ್ಯಗಳನ್ನು ಅಳಿಸುತ್ತವೆ.