+ -

عَنِ شُرَيْحٍ بنِ هانِئٍ قَالَ:
سَأَلْتُ عَائِشَةَ، قُلْتُ: بِأَيِّ شَيْءٍ كَانَ يَبْدَأُ النَّبِيُّ صَلَّى اللهُ عَلَيْهِ وَسَلَّمَ إِذَا دَخَلَ بَيْتَهُ؟ قَالَتْ: بِالسِّوَاكِ.

[صحيح] - [رواه مسلم] - [صحيح مسلم: 253]
المزيــد ...

ಶುರೈಹ್ ಬಿನ್ ಹಾನಿಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ನಾನು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಗೆ ಪ್ರವೇಶಿಸಿದಾಗ ಮೊತ್ತಮೊದಲು ಏನು ಮಾಡುತ್ತಿದ್ದರು?" ಅವರು ಹೇಳಿದರು: "ಮಿಸ್ವಾಕ್ (ಹಲ್ಲುಗಳನ್ನು ಸ್ವಚ್ಛಗೊಳಿಸುವ ಕಡ್ಡಿ) ನಿಂದ ಹಲ್ಲು ಸ್ವಚ್ಛಗೊಳಿಸುತ್ತಿದ್ದರು."

[صحيح] - [رواه مسلم] - [صحيح مسلم - 253]

ವಿವರಣೆ

ತಮ್ಮ ಮನೆಗೆ ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಪ್ರವೇಶಿಸಿದಾಗ ಮೊತ್ತಮೊದಲು ಮಿಸ್ವಾಕ್‌ನಿಂದ ಹಲ್ಲು ಸ್ವಚ್ಛಗೊಳಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡತೆಯಾಗಿತ್ತು.

ಹದೀಸಿನ ಪ್ರಯೋಜನಗಳು

  1. ಸಾಮಾನ್ಯವಾಗಿ ಎಲ್ಲಾ ಸಮಯಗಳಲ್ಲೂ ಮಿಸ್ವಾಕ್ ಬಳಸುವುದು ಶಾಸ್ತ್ರೋಕ್ತ ನಿಯಮವಾಗಿದೆ. ಆದರೆ ಶಾಸನಕರ್ತರು ಪ್ರೋತ್ಸಾಹಿಸಿದ ಸಮಯಗಳಲ್ಲಿ ಅದನ್ನು ಬಳಸುವುದಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಆ ಸಮಯಗಳು ಯಾವುದೆಂದರೆ, ಮನೆಗೆ ಪ್ರವೇಶಿಸುವಾಗ, ನಮಾಝ್ ಮಾಡುವಾಗ, ವುಝೂ ಮಾಡುವಾಗ, ನಿದ್ರೆಯಿಂದ ಎದ್ದ ನಂತರ, ಮತ್ತು ಬಾಯಿಯ ವಾಸನೆ ಬರುವಾಗ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡತೆಗಳ ಬಗ್ಗೆ ಕೇಳಿ ತಿಳಿದು ಅದನ್ನು ಅನುಕರಿಸಲು ತಾಬಿಯಿಗಳು ತೋರಿಸುತ್ತಿದ್ದ ಉತ್ಸುಕತೆಯನ್ನು ವಿವರಿಸಲಾಗಿದೆ.
  3. ಜ್ಞಾನವನ್ನು ಅದರ ಜನರಿಂದ ಮತ್ತು ಅದರ ಬಗ್ಗೆ ಹೆಚ್ಚು ತಿಳಿದಿರುವವರಿಂದ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗೆ ಪ್ರವೇಶಿಸಿದಾಗ ಅವರ ಸ್ಥಿತಿಯು ಹೇಗಿತ್ತೆಂಬ ಬಗ್ಗೆ ಇಲ್ಲಿ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಲಾಗಿದೆ.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕುಟುಂಬದೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರೆಂದು ತಿಳಿಸಲಾಗಿದೆ. ಏಕೆಂದರೆ, ಅವರು ಮನೆಗೆ ಪ್ರವೇಶಿಸುವಾಗ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية الدرية الرومانية المجرية الموري الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ