عَنْ أَبِي هُرَيْرَةَ رضي الله عنه قَالَ:
قَالَ رَسُولُ اللهِ صَلَّى اللهُ عَلَيْهِ وَسَلَّمَ: «يَقُولُ اللهُ عَزَّ وَجَلَّ: أَنَا عِنْدَ ظَنِّ عَبْدِي، وَأَنَا مَعَهُ حِينَ يَذْكُرُنِي، فَإِنْ ذَكَرَنِي فِي نَفْسِهِ ذَكَرْتُهُ فِي نَفْسِي، وَإِنْ ذَكَرَنِي فِي مَلَإٍ ذَكَرْتُهُ فِي مَلَإٍ خَيْرٍ مِنْهُ، وَإِنِ اقْتَرَبَ إِلَيَّ شِبْرًا، تَقَرَّبْتُ إِلَيْهِ ذِرَاعًا، وَإِنِ اقْتَرَبَ إِلَيَّ ذِرَاعًا، اقْتَرَبْتُ إِلَيْهِ بَاعًا، وَإِنْ أَتَانِي يَمْشِي أَتَيْتُهُ هَرْوَلَةً».
[صحيح] - [متفق عليه] - [صحيح مسلم: 2675]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ ಇರುತ್ತೇನೆ. ಅವನು ನನ್ನನ್ನು ಮನಸ್ಸಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಅದಕ್ಕಿಂತಲೂ ಉತ್ತಮವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾಗುತ್ತೇನೆ. ಮತ್ತು ಅವನು ನನ್ನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಬಾವು (ಎರಡು ಕೈಗಳನ್ನು ಅಗಲಿಸಿದಾಗ ಉಂಟಾಗುವ ಅಳತೆ) ಅಂತರದಷ್ಟು ಹತ್ತಿರವಾಗುತ್ತೇನೆ. ಅವನು ನನ್ನ ಬಳಿಗೆ ನಡೆದುಕೊಂಡು ಬಂದರೆ, ನಾನು ಅವನ ಬಳಿಗೆ ಓಡುತ್ತಾ ಬರುತ್ತೇನೆ."
[صحيح] - [متفق عليه] - [صحيح مسلم - 2675]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅಂದರೆ, ನಾನು ನನ್ನ ದಾಸನೊಂದಿಗೆ ಅವನು ನನ್ನ ಬಗ್ಗೆ ಹೊಂದಿರುವ ನಿರೀಕ್ಷೆಗೆ ಅನುಗುಣವಾಗಿ, ಅಂದರೆ, ಅವನು ನನ್ನ ಬಗ್ಗೆ ಇಟ್ಟಿರುವ ಭರವಸೆ ಮತ್ತು ಕ್ಷಮೆಯ ನಿರೀಕ್ಷೆಯಂತೆ ವರ್ತಿಸುತ್ತೇನೆ. ಅವನು ನನ್ನಿಂದ ಒಳಿತನ್ನು ಅಥವಾ ಬೇರೆ ಏನನ್ನು ನಿರೀಕ್ಷಿಸುತ್ತಾನೋ ಅದರಂತೆ ನಾನು ಅವನೊಂದಿಗೆ ನಡೆದುಕೊಳ್ಳುತ್ತೇನೆ. ಅವನು ನನ್ನನ್ನು ನೆನಪಿಸಿಕೊಳ್ಳುವಾಗ ನಾನು ಕರುಣೆ, ಯಶಸ್ಸಿಗಿರುವ ಮಾರ್ಗದರ್ಶನ, ಸನ್ಮಾರ್ಗ ನಿರ್ದೇಶನ, ಕಾಳಜಿ ಮತ್ತು ಬೆಂಬಲದ ಮೂಲಕ ಅವನೊಂದಿಗೆ ಇರುತ್ತೇನೆ.
ಅವನು ನನ್ನನ್ನು ಮನಸ್ಸಿನಲ್ಲಿ, ಒಂಟಿಯಾಗಿ ಮತ್ತು ಏಕಾಂತದಲ್ಲಿ, ತಸ್ಬೀಹ್ ತಹ್ಲೀಲ್ ಮುಂತಾದವುಗಳ ಮೂಲಕ ನೆನಪಿಸಿಕೊಂಡರೆ; ನಾನು ಕೂಡ ಅವನನ್ನು ನನ್ನ ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ.
ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ; ನಾನು ಅವನನ್ನು ಅವರ ಗುಂಪಿಗಿಂತ ದೊಡ್ಡದಾದ ಮತ್ತು ಹೆಚ್ಚು ಶ್ರೇಷ್ಠವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ.
ಯಾರು ಅಲ್ಲಾಹನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾಗುತ್ತಾನೋ, ಅಲ್ಲಾಹು ಅವನಿಗೆ ಒಂದು ಮೊಳಕೈ ಅಂತರದಷ್ಟು ಹೆಚ್ಚು ಹತ್ತಿರವಾಗುತ್ತಾನೆ.
ಅವನು ಅಲ್ಲಾಹನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ಅಲ್ಲಾಹು ಅವನ ಕಡೆಗೆ ಒಂದು ಬಾವು ಅಂತರದಷ್ಟು ಹತ್ತಿರವಾಗುತ್ತಾನೆ.
ಅವನು ಅಲ್ಲಾಹನ ಬಳಿಗೆ ನಡೆದುಕೊಂಡು ಬಂದರೆ, ಅಲ್ಲಾಹು ಅವನ ಬಳಿಗೆ ಓಡುತ್ತಾ ಬರುತ್ತಾನೆ.
ಆದ್ದರಿಂದ, ದಾಸನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಿಧೇಯತೆಯೊಂದಿಗೆ ಹತ್ತಿರವಾದಾಗ, ಕರ್ಮದ ರೀತಿಯಲ್ಲೇ ಇರುವ ಪ್ರತಿಫಲಕ್ಕೆ ಅನುಗುಣವಾಗಿ ಅಲ್ಲಾಹು ಅವನ ಕಡೆಗಿರುವ ತನ್ನ ಸಾಮೀಪ್ಯವನ್ನು ಹೆಚ್ಚಿಸುತ್ತಾನೆ.
ಹೀಗೆ, ತನ್ನ ಪರಿಪಾಲಕನಿಗಿರುವ ಸತ್ಯವಿಶ್ವಾಸಿಯ ದಾಸ್ಯತ್ವವು ಪರಿಪೂರ್ಣವಾದಂತೆ, ಅಲ್ಲಾಹು ಅವನಿಗೆ ಹತ್ತಿರವಾಗುತ್ತಾ ಇರುತ್ತಾನೆ. ಏಕೆಂದರೆ, ಅಲ್ಲಾಹನ ಕೊಡುಗೆ ಮತ್ತು ಪ್ರತಿಫಲವು ದಾಸನು ಮಾಡುವ ಕೆಲಸ-ಕಾರ್ಯಗಳಿಗಿಂತ ದೊಡ್ಡದಾಗಿದೆ. ಒಟ್ಟಿನಲ್ಲಿ, ಅಲ್ಲಾಹನ ಪ್ರತಿಫಲವು ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ ಕರ್ಮಕ್ಕಿಂತ ದೊಡ್ಡದಾಗಿದೆ.
ಆದ್ದರಿಂದ, ಸತ್ಯವಿಶ್ವಾಸಿಯು ಅಲ್ಲಾಹನನ್ನು ಭೇಟಿಯಾಗುವ ವರೆಗೂ ಅವನ ಬಗ್ಗೆ ಉತ್ತಮ ನಿರೀಕ್ಷೆಯನ್ನಿಟ್ಟು ಕರ್ಮವೆಸಗುತ್ತಾನೆ ಮತ್ತು ಸತ್ಕರ್ಮಗಳಿಗಾಗಿ ತ್ವರೆ ಮಾಡುತ್ತಾನೆ ಹಾಗೂ ಹೆಚ್ಚಿಸುತ್ತಾನೆ.