عن عائشة رضي الله عنها قالت: قال رسول الله صلى الله عليه وسلم:
«السِّوَاكُ مَطْهَرَةٌ لِلْفَمِ، مَرْضَاةٌ لِلرَّبِّ».
[صحيح] - [رواه النسائي وأحمد] - [مسند أحمد: 24203]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಸಿವಾಕ್ (ಹಲ್ಲುಜ್ಜುವುದು) ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅಲ್ಲಾಹನನ್ನು ಸಂಪ್ರೀತಗೊಳಿಸುತ್ತದೆ.”
[صحيح] - [رواه النسائي وأحمد] - [مسند أحمد - 24203]
ಅರಾಕ್ ಕಡ್ಡಿ ಮುಂತಾದವುಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿಯು ಹೊಲಸು ಮತ್ತು ದುರ್ನಾತವಿಲ್ಲದೆ ಶುದ್ಧವಾಗಿರುತ್ತದೆ, ಮತ್ತು ಅದರಿಂದ ಅಲ್ಲಾಹು ದಾಸನ ಬಗ್ಗೆ ಸಂಪ್ರೀತನಾಗುತ್ತಾನೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಏಕೆಂದರೆ, ಅದು ಅಲ್ಲಾಹನಿಗೆ ವಿಧೇಯತೆ ತೋರುವುದು ಮತ್ತು ಅವನ ಆಜ್ಞಾಪಾಲನೆ ಮಾಡುವುದಾಗಿದೆ. ಮಾತ್ರವಲ್ಲದೆ, ಅದರಿಂದ ಅಲ್ಲಾಹು ಇಷ್ಟಪಡುವ ಸ್ವಚ್ಛತೆಯೂ ಉಂಟಾಗುತ್ತದೆ.