عن أبِي هريرة رضي اللَّه عنه: سمعتُ النبِيّ صلى الله عليه وسلم يقول:
«الفِطْرَةُ خمسٌ: الخِتَانُ والاستحدادُ وقصُّ الشَّارِبِ وتقليمُ الأظفارِ وَنَتْفُ الآبَاطِ».
[صحيح] - [متفق عليه] - [صحيح البخاري: 5891]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಐದು ಕಾರ್ಯಗಳು ಫಿತ್ರ (ಸಹಜ ಮನೋಧರ್ಮ) ದ ಭಾಗವಾಗಿವೆ: ಸುನ್ನತಿ ಮಾಡುವುದು, ಗುಹ್ಯಭಾಗದ ರೋಮವನ್ನು ಬೋಳಿಸುವುದು, ಮೀಸೆ ಕಿರಿದಾಗಿಸುವುದು, ಉಗುರುಗಳನ್ನು ಕತ್ತರಿಸುವುದು ಮತ್ತು ಕಂಕುಳದ ರೋಮವನ್ನು ಕೀಳುವುದು."
[صحيح] - [متفق عليه] - [صحيح البخاري - 5891]
ಇಸ್ಲಾಂ ಧರ್ಮದಲ್ಲಿ ಮತ್ತು ಪ್ರವಾದಿಗಳ ಚರ್ಯೆಯಲ್ಲಿ ಸೇರಿದ ಐದು ಕಾರ್ಯಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ:
ಮೊದಲನೆಯದು: ಸುನ್ನತಿ ಮಾಡುವುದು. ಅಂದರೆ ಪುರುಷ ಜನನಾಂಗದ ತುದಿಯಲ್ಲಿರುವ ಹೆಚ್ಚುವರಿ ಚರ್ಮವನ್ನು ಕತ್ತರಿಸುವುದು ಮತ್ತು ಸ್ತ್ರೀಯ ಜನನಾಂಗದ ಸಂಭೋಗ ಸ್ಥಳದಲ್ಲಿರುವ ಅಂಗದ ತುದಿಯಲ್ಲಿರುವ ಹೆಚ್ಚುವರಿ ಚರ್ಮವನ್ನು ಕತ್ತರಿಸುವುದು.
ಎರಡನೆಯದು: ಗುಹ್ಯಭಾಗದ ರೋಮವನ್ನು ಬೋಳಿಸುವುದು. ಅಂದರೆ ಖಾಸಗಿ ಭಾಗಗಳ ಸುತ್ತಲಲ್ಲಿರುವ ರೋಮಗಳನ್ನು ಬೋಳಿಸುವುದು.
ಮೂರನೆಯದು: ಮೀಸೆಯನ್ನು ಕಿರಿದಾಗಿಸುವುದು. ಅಂದರೆ ಪುರುಷನ ಮೇಲ್ದುದಿಯು ಗೋಚರವಾಗುವ ರೀತಿಯಲ್ಲಿ ಅದರಲ್ಲಿರುವ ರೋಮಗಳನ್ನು ಕತ್ತರಿಸುವುದು.
ನಾಲ್ಕನೆಯದು: ಉಗುರುಗಳನ್ನು ಕತ್ತರಿಸುವುದು.
ಐದನೆಯದು: ಕಂಕುಳದ ರೋಮವನ್ನು ಕೀಳುವುದು.