عَنْ زَيْنَبَ بِنْتِ جَحْشٍ رَضِيَ اللَّهُ عَنْها أَنَّ النَّبِيَّ صَلَّى اللهُ عَلَيْهِ وَسَلَّمَ دَخَلَ عَلَيْهَا فَزِعًا يَقُولُ:
«لاَ إِلَهَ إِلَّا اللَّهُ، وَيْلٌ لِلْعَرَبِ مِنْ شَرٍّ قَدِ اقْتَرَبَ، فُتِحَ اليَوْمَ مِنْ رَدْمِ يَأْجُوجَ وَمَأْجُوجَ مِثْلُ هَذِهِ» وَحَلَّقَ بِإِصْبَعِهِ الإِبْهَامِ وَالَّتِي تَلِيهَا، قَالَتْ زَيْنَبُ بِنْتُ جَحْشٍ فَقُلْتُ يَا رَسُولَ اللَّهِ: أَنَهْلِكُ وَفِينَا الصَّالِحُونَ؟ قَالَ: «نَعَمْ إِذَا كَثُرَ الخَبَثُ».
[صحيح] - [متفق عليه] - [صحيح البخاري: 3346]
المزيــد ...
ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಬರಿಯಿಂದ ಅವರ ಬಳಿಗೆ ಬಂದು ಹೇಳತೊಡಗಿದರು:
"ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಝೈನಬ್ ಬಿಂತ್ ಜಹ್ಶ್ ಹೇಳಿದರು: "ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ನೀತಿವಂತರು ಇರುವಾಗ ನಾವು ನಾಶವಾಗುವೆವೇ?" ಅವರು ಉತ್ತರಿಸಿದರು: "ಹೌದು, ಕೆಡುಕು ಹೆಚ್ಚಾದಾಗ."
[صحيح] - [متفق عليه] - [صحيح البخاري - 3346]
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಗಾಬರಿ ಮತ್ತು ಭಯದಿಂದ ಬಂದು ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ." ಸರ್ವಶಕ್ತನಾದ ಅಲ್ಲಾಹನಲ್ಲಿ ಆಶ್ರಯ ಬೇಡುವ ಹೊರತು ಪಾರಾಗಲು ಸಾಧ್ಯವಿಲ್ಲದಂತಹ ಅಹಿತಕರವಾದ ಏನಾದರೂ ಸಂಭವಿಸುವ ನಿರೀಕ್ಷೆಯನ್ನು ಸೂಚಿಸುವುದಕ್ಕಾಗಿ ಹೀಗೆ ಘೋಷಿಸಲಾಗುತ್ತದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶೀಘ್ರದಲ್ಲೇ ಸಂಭವಿಸಲಿರುವ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ—ಇದು ದುಲ್-ಕರ್ನೈನ್ ನಿರ್ಮಿಸಿದ ಗೋಡೆ—ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಆಗ ಝೈನಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದರು: "ನಮ್ಮಲ್ಲಿ ಸತ್ಯವಿಶ್ವಾಸಿಗಳಾದ ಸಜ್ಜನರು ಇರುವಾಗ ಅಲ್ಲಾಹು ನಮ್ಮ ಮೇಲೆ ವಿನಾಶವನ್ನು ಹೇಗೆ ಹೊರಿಸುತ್ತಾನೆ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅನೈತಿಕತೆ, ದುರಾಚಾರ, ಪಾಪಗಳು, ವ್ಯಭಿಚಾರ, ಮದ್ಯಪಾನ ಮತ್ತು ಇತರ ವಿಷಯಗಳು ವ್ಯಾಪಕವಾಗಿ ಹರಡುವಾಗ ವಿನಾಶವು ಸಾರ್ವತ್ರಿಕವಾಗಿ ಸಂಭವಿಸುತ್ತದೆ."