ಹದೀಸ್‌ಗಳ ಪಟ್ಟಿ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾದರಕ್ಷೆ ಧರಿಸುವಾಗ, ತಲೆ ಬಾಚುವಾಗ, ಶುದ್ಧೀಕರಿಸುವಾಗ, ಮತ್ತು ತಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲೂ ಬಲಭಾಗದಿಂದ ಪ್ರಾರಂಭಿಸಲು ಇಷ್ಟಪಡುತ್ತಿದ್ದರು
عربي الإنجليزية الأوردية
ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ರಕಅತ್‌ಗಳನ್ನು ಜ್ಞಾಪಕದಲ್ಲಿಟ್ಟಿದ್ದೇನೆ
عربي الإنجليزية الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ನಿದ್ರೆಯಿಂದ ಎದ್ದರೆ, ಹಲ್ಲುಜ್ಜುವ ಕಡ್ಡಿಯಿಂದ ತಮ್ಮ ಬಾಯಿಯನ್ನು ಸ್ವಚ್ಛಗೊಳಿಸುತ್ತಿದ್ದರು
عربي الإنجليزية الأوردية
ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ
عربي الإنجليزية الأوردية
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ನಿರ್ವಹಿಸುವಾಗ ತಮ್ಮ ಎರಡು ಕೈಗಳನ್ನು, ತಮ್ಮ ಕಂಕುಳದ ಬಿಳುಪು ಗೋಚರವಾಗುವ ತನಕ ಅಗಲಿಸುತ್ತಿದ್ದರು
عربي الإنجليزية الأوردية
ನಾನು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ಪಾತ್ರೆಯಿಂದ ಸ್ನಾನ ಮಾಡುತ್ತಿದ್ದೆವು. ಆಗ ನಾವಿಬ್ಬರೂ ದೊಡ್ಡ ಅಶುದ್ಧಿಯಲ್ಲಿದ್ದೆವು. ನಾನು ಮುಟ್ಟಿನಲ್ಲಿರುವ ಸಂದರ್ಭದಲ್ಲಿ ಅವರು ನನಗೆ ಸೊಂಟದ ಕೆಳಗಿನ ಬಟ್ಟೆ ಧರಿಸಲು ಆದೇಶಿಸುತ್ತಿದ್ದರು ಮತ್ತು ನನ್ನನ್ನು ಮುದ್ದಾಡುತ್ತಿದ್ದರು
عربي الإنجليزية الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯಕ್ಕೆ ಪ್ರವೇಶಿಸುತ್ತಿದ್ದರು. ಆಗ ನಾನು ಮತ್ತು ನನ್ನ ವಯಸ್ಸಿನ ಇನ್ನೊಬ್ಬ ಬಾಲಕ ನೀರಿನ ಒಂದು ಸಣ್ಣ ಚರ್ಮದ ಪಾತ್ರೆ ಮತ್ತು ಒಂದು ಚಿಕ್ಕ ಕೋಲನ್ನು ಹೊತ್ತುಕೊಂಡು ಹೋಗುತ್ತಿದ್ದೆವು. ಆಗ ಅವರು ನೀರಿನಿಂದ ಇಸ್ತಿಂಜಾ (ಶುದ್ಧೀಕರಣ) ಮಾಡುತ್ತಿದ್ದರು
عربي الإنجليزية الأوردية
ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಒಂದು ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ, ಅದರಲ್ಲಿ ಒಂದು ಹೊತ್ತಿನ ಊಟ ಖಂಡಿತವಾಗಿಯೂ ಖರ್ಜೂರವಾಗಿರುತ್ತಿತ್ತು
عربي الإنجليزية الأوردية
ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಮದೀನಕ್ಕೆ ಬಂದಾಗಿನಿಂದ, ಅವರು (ಪ್ರವಾದಿ) ಮರಣ ಹೊಂದುವವರೆಗೂ, ಸತತವಾಗಿ ಮೂರು ರಾತ್ರಿಗಳ ಕಾಲ ಗೋಧಿಯ ಆಹಾರದಿಂದ ಹೊಟ್ಟೆ ತುಂಬಿಸಿಲ್ಲ
عربي الإنجليزية الأوردية
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು
عربي الإنجليزية الأوردية
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ, (ತಮ್ಮ ಹಿಂದೆ) ಒಂದು ದಿರ್ಹಮ್ ಆಗಲಿ, ಒಂದು ದೀನಾರ್ ಆಗಲಿ, ಓರ್ವ ದಾಸನನ್ನಾಗಲಿ, ಓರ್ವ ದಾಸಿಯನ್ನಾಗಲಿ ಅಥವಾ ಬೇರೇನನ್ನೂ ಬಿಟ್ಟುಹೋಗಲಿಲ್ಲ. ಕೇವಲ ತಮ್ಮ ಬಿಳಿ ಹೇಸರಗತ್ತೆ, ತಮ್ಮ ಆಯುಧ ಮತ್ತು ತಾವು ದಾನವಾಗಿ ನೀಡಿದ ಒಂದು ಭೂಮಿಯನ್ನು ಹೊರತುಪಡಿಸಿ
عربي الإنجليزية الأوردية
ನಾನು ಶಪಿಸುವವನಾಗಿ ಕಳುಹಿಸಲ್ಪಟ್ಟಿಲ್ಲ. ಬದಲಾಗಿ, ನಾನು ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ
عربي الإنجليزية الأوردية
ಕೆಲವು ಜನರಿಗೆ ಏನಾಗಿದೆ? ಅವರೇಕೆ ಹೀಗೆ ಹೀಗೆ ಹೇಳುತ್ತಿದ್ದಾರೆ? ಆದರೆ, ನಾನು ನಮಾಝ್ ಮಾಡುತ್ತೇನೆ ಮತ್ತು ಮಲಗುತ್ತೇನೆ, ಉಪವಾಸ ಆಚರಿಸುತ್ತೇನೆ ಮತ್ತು ಆಚರಿಸದೆ ಇರುತ್ತೇನೆ, ಹಾಗೂ ಸ್ತ್ರೀಯರನ್ನು ಮದುವೆಯಾಗುತ್ತೇನೆ. ಯಾರು ನನ್ನ ಸುನ್ನತ್‌ನಿಂದ ವಿಮುಖರಾಗುತ್ತಾರೋ ಅವರು ನನ್ನವರಲ್ಲ
عربي الإنجليزية الأوردية