+ -

عَنْ عَبْدِ اللهِ بْنِ مَسْعُودٍ رضي الله عنه قَالَ: سَمِعْتُ النَّبِيَّ صَلَّى اللَّهُ عَلَيْهِ وَسَلَّمَ يَقُولُ:
«نَضَّرَ اللَّهُ امْرَأً سَمِعَ مِنَّا شَيْئًا فَبَلَّغَهُ كَمَا سَمِعَ، فَرُبَّ مُبَلِّغٍ أَوْعَى مِنْ سَامِعٍ».

[صحيح] - [رواه الترمذي وابن ماجه وأحمد] - [سنن الترمذي: 2657]
المزيــد ...

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು."

[صحيح] - [رواه الترمذي وابن ماجه وأحمد] - [سنن الترمذي - 2657]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಹದೀಸ್‌ಗಳನ್ನು ಕೇಳಿ ಅದನ್ನು ಇತರರಿಗೆ ತಲುಪಿಸುವವರೆಗೆ ನೆನಪಿಟ್ಟುಕೊಳ್ಳುವ ವ್ಯಕ್ತಿಯು ಈ ಜಗತ್ತಿನಲ್ಲಿ ಪ್ರಕಾಶಮಾನವಾಗಿರಲಿ, ಸಂತೋಷದಿಂದಿರಲಿ ಮತ್ತು ಸುಂದರವಾಗಿರಲಿ, ಮತ್ತು ಅಲ್ಲಾಹನು ಅವನನ್ನು ಪರಲೋಕದಲ್ಲಿ ಸ್ವರ್ಗದ ಪ್ರಕಾಶಮಾನತೆ, ಆನಂದ ಮತ್ತು ಸೌಂದರ್ಯಕ್ಕೆ ಸೇರಿಸಲಿ ಎಂದು ಪ್ರಾರ್ಥಿಸಿದರು. ಏಕೆಂದರೆ ಕೆಲವೊಮ್ಮೆ ಹದೀಸ್ ಅನ್ನು ತಲುಪಿಸಿದ ವ್ಯಕ್ತಿಗಿಂತ ಅದನ್ನು ಸ್ವೀಕರಿಸಿದ ವ್ಯಕ್ತಿಯು ಹೆಚ್ಚು ಗ್ರಹಿಸುವವನು, ಹೆಚ್ಚು ಜ್ಞಾನವುಳ್ಳವನು ಮತ್ತು ಹದೀಸ್‌ನಿಂದ ನಿಯಮಗಳನ್ನು ಸಂಶೋಧಿಸುವುದರಲ್ಲಿ ಹೆಚ್ಚು ಸಮರ್ಥನಾಗಿರಬಹುದು. ಮೊದಲನೆಯವನು ನೆನಪಿಟ್ಟುಕೊಳ್ಳುವುದು ಮತ್ತು ತಲುಪಿಸುವುದರಲ್ಲಿ ಪರಿಣಿತನಾಗಿರಬಹುದು ಮತ್ತು ಎರಡನೆಯವನು ಅರ್ಥಮಾಡಿಕೊಳ್ಳುವುದು ಮತ್ತು ನಿಯಮಗಳನ್ನು ಸಂಶೋಧಿಸುವುದರಲ್ಲಿ ಪರಿಣಿತನಾಗಿರಬಹುದು.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್ ಅನ್ನು ನೆನಪಿಟ್ಟುಕೊಳ್ಳಲು ಮತ್ತು ಅದನ್ನು ಜನರಿಗೆ ತಲುಪಿಸಲು ಪ್ರೋತ್ಸಾಹಿಸಲಾಗಿದೆ.
  2. ಹದೀಸ್‌ನ ಜನರ ಶ್ರೇಷ್ಠತೆ ಮತ್ತು ಅದನ್ನು ಕಲಿಯುವ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
  3. ಸಂಶೋಧನೆ ಮತ್ತು ಅರ್ಥಗ್ರಹಣದಲ್ಲಿ ಪರಿಣಿತರಾದ ವಿದ್ವಾಂಸರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  4. ಸಹಾಬಿಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಅವರು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸನ್ನು ಕೇಳಿ ಅದನ್ನು ನಮಗೆ ತಲುಪಿಸಿದ್ದಾರೆ.
  5. ಹದೀಸ್ ವರದಿ ಮಾಡುವವನಿಗೆ ಪಾಂಡಿತ್ಯವಿರಬೇಕಾದುದು ಷರತ್ತಲ್ಲ, ಬದಲಿಗೆ ನೆನಪಿಟ್ಟುಕೊಳ್ಳುವುದು ಮಾತ್ರ ಅವನ ಷರತ್ತಾಗಿದೆ. ಆದರೆ ಕರ್ಮಶಾಸ್ತ್ರಜ್ಞನಿಗೆ ಪಾಂಡಿತ್ಯ ಮತ್ತು ಆಳವಾದ ಚಿಂತನೆ ಎರಡೂ ಇರುವುದು ಅತ್ಯಗತ್ಯವಾಗಿದೆ ಎಂದು ಇದರಲ್ಲಿ ವಿವರಿಸಲಾಗಿದೆ.
  6. ಇಬ್ನ್ ಉಯೈನಾ ಹೇಳುತ್ತಾರೆ: ಈ ಹದೀಸಿನಲ್ಲಿ ವಿವರಿಸಿರುವಂತೆ, ಹದೀಸ್ ಕಲಿಯುವ ಪ್ರತಿಯೊಬ್ಬರ ಮುಖದಲ್ಲೂ ಒಂದು ಪ್ರಕಾಶ (ಚ್ಯೆತನ್ಯ) ವಿಲ್ಲದೆ ಇರುವುದಿಲ್ಲ.
  7. ಮುಹದ್ದಿಸೀನ್‌ಗಳ (ಹದೀಸ್ ವಿದ್ವಾಂಸರು) ಪ್ರಕಾರ ನೆನಪಿಟ್ಟುಕೊಳ್ಳುವುದು ಎರಡು ವಿಧಗಳಲ್ಲಿವೆ: ಒಂದು - ಹೃದಯ ಮತ್ತು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳುವುದು, ಇನ್ನೊಂದು - ಪುಸ್ತಕ ಮತ್ತು ಬರಹದಲ್ಲಿ ನೆನಪಿಟ್ಟುಕೊಳ್ಳುವುದು. ಇವೆರಡನ್ನೂ ಹದೀಸ್‌ನಲ್ಲಿನ ಪ್ರಾರ್ಥನೆಯು ಒಳಗೊಳ್ಳುತ್ತದೆ.
  8. ಜನರ ತಿಳುವಳಿಕೆಯ ಮಟ್ಟಗಳು ವಿಭಿನ್ನವಾಗಿರುತ್ತವೆ. ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಕೆಲವೊಮ್ಮೆ ಪಾಂಡಿತ್ಯವನ್ನು ಸಾಗಿಸುವವನು ಪಂಡಿತನಾಗಿರುವುದಿಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية السويدية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು