عن طارق بن أشيم الأشجعي رضي الله عنه قال: سمعت رسول الله صلى الله عليه وسلم يقول:
«مَنْ قَالَ: لَا إِلَهَ إِلَّا اللهُ، وَكَفَرَ بِمَا يُعْبَدُ مِنْ دُونِ اللهِ حَرُمَ مَالُهُ وَدَمُهُ، وَحِسَابُهُ عَلَى اللهِ».
[صحيح] - [رواه مسلم] - [صحيح مسلم: 23]
المزيــد ...
ತಾರಿಕ್ ಬಿನ್ ಅಶೀಮ್ ಅಶ್ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ."
[صحيح] - [رواه مسلم] - [صحيح مسلم - 23]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ) ಎಂದು ಸಾಕ್ಷಿವಹಿಸಿ ನಾಲಿಗೆಯಿಂದ ಉಚ್ಛರಿಸುವವರು ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುವವರು ಹಾಗೂ ಇಸ್ಲಾಂ ಧರ್ಮದ ಹೊರತು ಬೇರೆ ಎಲ್ಲಾ ಧರ್ಮಗಳಿಂದ ದೂರ ಸರಿಯುವವರು ಯಾರೋ ಅವರ ಆಸ್ತಿ ಮತ್ತು ಪ್ರಾಣವು ಇತರ ಮುಸಲ್ಮಾನರಿಗೆ ಪವಿತ್ರವಾಗಿವೆ. ನಾವು ಅವರ ಬಾಹ್ಯ ಕರ್ಮಗಳನ್ನು ನೋಡಿ ನಿರ್ಧರಿಸಬೇಕು. ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಯಾರಿಗೂ ಅನುಮತಿಯಿಲ್ಲ. ಇಸ್ಲಾಮೀ ಕಾನೂನಿನ ಪ್ರಕಾರ ಶಿಕ್ಷೆಯ ರೂಪದಲ್ಲಿ ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಅನುಮತಿ ನೀಡುವ ಯಾವುದಾದರೂ ಅಪರಾಧವನ್ನು ಅವರು ಮಾಡಿದ ಹೊರತು.
ಪುನರುತ್ಥಾನ ದಿನದಂದು ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ. ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅವರಿಗೆ ಪ್ರತಿಫಲವಿದೆ. ಅವರು ಕಪಟವಿಶ್ವಾಸಿಗಳಾಗಿದ್ದರೆ ಅವರಿಗೆ ಶಿಕ್ಷೆಯಿದೆ.