عن أبي هريرة رضي الله عنه أن رسول الله صلى الله عليه وسلم قال:
«كُلُّ أُمَّتِي يَدْخُلُونَ الْجَنَّةَ إِلَّا مَنْ أَبَى»، قَالُوا: يَا رَسُولَ اللهِ، وَمَنْ يَأْبَى؟ قَالَ: «مَنْ أَطَاعَنِي دَخَلَ الْجَنَّةَ، وَمَنْ عَصَانِي فَقَدْ أَبَى».
[صحيح] - [رواه البخاري] - [صحيح البخاري: 7280]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನ ಸಮುದಾಯದಲ್ಲಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವನ ಹೊರತು." ಅನುಯಾಯಿಗಳು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! (ಸ್ವರ್ಗಕ್ಕೆ ಹೋಗಲು) ನಿರಾಕರಿಸುವವನು ಯಾರು?" ಅವರು ಉತ್ತರಿಸಿದರು: "ಯಾರು ನನ್ನ ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಮತ್ತು ಯಾರು ನನ್ನ ಆಜ್ಞೆಗಳನ್ನು ಪಾಲಿಸುವುದಿಲ್ಲವೋ ಅವನು (ಸ್ವರ್ಗಕ್ಕೆ ಹೋಗಲು) ನಿರಾಕರಿಸಿದನು."
[صحيح] - [رواه البخاري] - [صحيح البخاري - 7280]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಸಮುದಾಯಕ್ಕೆ ಸೇರಿದ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ; ನಿರಾಕರಿಸಿದವರ ಹೊರತು!
ಆಗ ಸಂಗಡಿಗರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಕೇಳುತ್ತಾರೆ: "ಓ ಅಲ್ಲಾಹನ ಸಂದೇಶವಾಹಕರೇ! ನಿರಾಕರಿಸುವವರು ಯಾರು?!"
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸುತ್ತಾ ಹೇಳುತ್ತಾರೆ: "ಯಾರು ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಾಲನೆ ಮಾಡುತ್ತಾನೋ ಮತ್ತು ಅನುಸರಿಸುತ್ತಾನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ; ಆದರೆ, ಯಾರು ಅವರ ಆಜ್ಞಾಪಾಲನೆ ಮಾಡುವುದಿಲ್ಲವೋ ಮತ್ತು ಧರ್ಮನಿಯಮಗಳನ್ನು ಅನುಸರಿಸುವುದಿಲ್ಲವೋ ಅವನು ತನ್ನ ದುಷ್ಕರ್ಮಗಳ ನಿಮಿತ್ತ ಸ್ವರ್ಗಕ್ಕೆ ಹೋಗಲು ನಿರಾಕರಿಸಿದ್ದಾನೆ."