+ -

عَنْ أَبِي هُرَيْرَةَ رضي الله عنه عَنْ رَسُولِ اللهِ صلى الله عليه وسلم أنه قال:
«وَالَّذِي نَفْسُ مُحَمَّدٍ بِيَدِهِ لَا يَسْمَعُ بِي أَحَدٌ مِنْ هَذِهِ الْأُمَّةِ يَهُودِيٌّ وَلَا نَصْرَانِيٌّ، ثُمَّ يَمُوتُ وَلَمْ يُؤْمِنْ بِالَّذِي أُرْسِلْتُ بِهِ إِلَّا كَانَ مِنْ أَصْحَابِ النَّارِ».

[صحيح] - [رواه مسلم] - [صحيح مسلم: 153]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಈ ಸಮುದಾಯದಲ್ಲಿ ಸೇರಿದ ಯಹೂದಿಗಳು, ಕ್ರೈಸ್ತರು ಅಥವಾ ಇತರ ಯಾರೇ ಆಗಲಿ, ನನ್ನ ಬಗ್ಗೆ ಕೇಳಿಯೂ, ನನ್ನನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿದೆಯೋ ಅದರಲ್ಲಿ ವಿಶ್ವಾಸವಿಡದೆ ಸಾವನ್ನಪ್ಪಿದರೆ, ಅವರು ನರಕವಾಸಿಗಳಲ್ಲಿ ಸೇರುವುದು ಖಚಿತ."

[صحيح] - [رواه مسلم] - [صحيح مسلم - 153]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಲ್ಲಾಹನ ಮೇಲೆ ಆಣೆ ಮಾಡುತ್ತಾ ಹೇಳುವುದೇನೆಂದರೆ, ಈ ಸಮುದಾಯದಲ್ಲಿ ಸೇರಿದ ಯಹೂದಿಗಳು, ಕ್ರೈಸ್ತರು ಅಥವಾ ಇತರ ಯಾರೇ ಆಗಲಿ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಕೇಳಿಯೂ, ಅವರ ಬೋಧನೆಯು ತಲುಪಿಯೂ, ಅದರಲ್ಲಿ ವಿಶ್ವಾಸವಿಡದೆ ಸಾವನ್ನಪ್ಪಿದರೆ, ಅವರು ಶಾಶ್ವತವಾಗಿ ನರಕವಾಸಿಗಳಾಗುವುದು ಖಂಡಿತ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂದೇಶವು ಸಂಪೂರ್ಣ ಜಗತ್ತಿಗೆ ಸಾರ್ವತ್ರಿಕವಾಗಿದೆ. ಅವರನ್ನು ಅನುಸರಿಸುವುದು ಕಡ್ಡಾಯವಾಗಿದೆ. ಅವರ ಧರ್ಮಶಾಸ್ತ್ರದ ಮೂಲಕ ಇತರ ಎಲ್ಲಾ ಧರ್ಮಶಾಸ್ತ್ರಗಳನ್ನು ಅಸಿಂಧುಗೊಳಿಸಲಾಗಿದೆ.
  2. ಯಾರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡುವುದಿಲ್ಲವೋ ಅವರಿಗೆ ಆ ವಿಶ್ವಾಸವು ಪ್ರಯೋಜನಪಡುವುದಿಲ್ಲ. ಅವರು ಇತರೆಲ್ಲಾ ಪ್ರವಾದಿಗಳಲ್ಲಿ ವಿಶ್ವಾಸವಿಡುತ್ತೇವೆಂದು ವಾದಿಸಿದರೂ ಸಹ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಕೇಳದ ಮತ್ತು ಇಸ್ಲಾಮಿನ ಸಂದೇಶವು ತಲುಪದ ಜನರು ತಪ್ಪಿತಸ್ಥರಾಗುವುದಿಲ್ಲ. ಪರಲೋಕದಲ್ಲಿ ಅವರ ವಿಷಯವನ್ನು ಅಲ್ಲಾಹನ ಇಚ್ಛೆಗೆ ಬಿಟ್ಟುಬಿಡಲಾಗುತ್ತದೆ.
  4. ಸಾವಿಗೆ ಕೆಲವೇ ಕ್ಷಣಗಳ ಮೊದಲು ಇಸ್ಲಾಂ ಸ್ವೀಕರಿಸಿದರೂ ಅದರಿಂದ ಪ್ರಯೋಜನವಾಗುತ್ತದೆ. ಅದು ತೀವ್ರ ಅನಾರೋಗ್ಯದ ಸ್ಥಿತಿಯಲ್ಲಾದರೂ ಸಹ. ಆದರೆ ಆತ್ಮವು ಗಂಟಲಿಗೆ ತಲುಪಿದರೆ ಪ್ರಯೋಜನವಾಗುವುದಿಲ್ಲ.
  5. ಯಹೂದಿಗಳು ಮತ್ತು ಕ್ರೈಸ್ತರು ಸೇರಿದಂತೆ ಸತ್ಯನಿಷೇಧಿಗಳ ಧರ್ಮವನ್ನು ಸರಿಯೆಂದು ಹೇಳುವುದು ಸತ್ಯನಿಷೇಧವಾಗಿದೆ.
  6. ಇಲ್ಲಿ ಯಹೂದಿಗಳ ಮತ್ತು ಕ್ರೈಸ್ತರ ಹೆಸರೆತ್ತಿ ಹೇಳಿರುವುದರಿಂದ ತಿಳಿದುಬರುವುದೇನೆಂದರೆ, ದೈವಿಕ ಗ್ರಂಥಗಳನ್ನು ಹೊಂದಿರುವ ಯಹೂದಿಗಳು ಮತ್ತು ಕ್ರೈಸ್ತರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದು ಕಡ್ಡಾಯವಾಗಿರುವಾಗ, ದೈವಿಕ ಗ್ರಂಥಗಳನ್ನು ಹೊಂದಿರದ ಇತರ ಧರ್ಮದವರು ಅದಕ್ಕೆ ಇನ್ನೂ ಹೆಚ್ಚು ಅರ್ಹರಾಗಿದ್ದಾರೆ.
ಇನ್ನಷ್ಟು