عَنْ مَحْمُودِ بْنِ لَبِيدٍ رضي الله عنه أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ:
«إِنَّ أَخْوَفَ مَا أَخَافُ عَلَيْكُمُ الشِّرْكُ الْأَصْغَرُ» قَالُوا: وَمَا الشِّرْكُ الْأَصْغَرُ يَا رَسُولَ اللهِ؟ قَالَ: «الرِّيَاءُ، يَقُولُ اللهُ عز وجل لَهُمْ يَوْمَ الْقِيَامَةِ إِذَا جُزِيَ النَّاسُ بِأَعْمَالِهِمْ: اذْهَبُوا إِلَى الَّذِينَ كُنْتُمْ تُرَاؤُونَ فِي الدُّنْيَا، فَانْظُرُوا هَلْ تَجِدُونَ عِنْدَهُمْ جَزَاءً؟».
[حسن] - [رواه أحمد] - [مسند أحمد: 23630]
المزيــد ...
ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು. ಪುನರುತ್ಥಾನ ದಿನದಂದು ಜನರಿಗೆ ಅವರ ಕರ್ಮಗಳ ಪ್ರತಿಫಲವನ್ನು ನೀಡುವಾಗ ತೋರಿಕೆಗಾಗಿ ಕೆಲಸ ಮಾಡಿದವರೊಡನೆ ಅಲ್ಲಾಹು ಹೇಳುವನು: 'ನೀವು ಇಹಲೋಕದಲ್ಲಿ ಯಾರಿಗೆ ತೋರಿಸಲು ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ಅವರಿಂದ ಏನಾದರೂ ಪ್ರತಿಫಲ ಸಿಗಬಹುದೇ ಎಂದು ನೋಡಿ."
[حسن] - [رواه أحمد] - [مسند أحمد - 23630]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ತಮ್ಮ ಸಮುದಾಯದ ಬಗ್ಗೆ ಸಣ್ಣ ಶಿರ್ಕನ್ನು (ಸಣ್ಣ ಬಹುದೇವತ್ವವನ್ನು), ಅಂದರೆ ತೋರಿಕೆಯನ್ನು ಅಥವಾ ಜನರ ತೃಪ್ತಿಗಾಗಿ ಕೆಲಸ ಮಾಡುವುದನ್ನು ಅತಿಯಾಗಿ ಭಯಪಡುತ್ತಾರೆ. ನಂತರ ಅವರು ತೋರಿಕೆಗಾಗಿ ಕೆಲಸ ಮಾಡುವವರಿಗೆ ಪರಲೋಕದಲ್ಲಿ ದೊರೆಯುವ ಶಿಕ್ಷೆಯ ಬಗ್ಗೆ ತಿಳಿಸುತ್ತಾರೆ. ಅದೇನೆಂದರೆ, ಅವರೊಡನೆ ಹೀಗೆ ಹೇಳಲಾಗುವುದು: "ನೀವು ಯಾರಿಗೆ ತೋರಿಸುವುದಕ್ಕಾಗಿ ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ನೀವು ಮಾಡಿದ ಕೆಲಸಕ್ಕೆ ಏನಾದರೂ ಪ್ರತಿಫಲ ನೀಡಲು ಅವರಿಗೆ ಸಾಧ್ಯವೇ ಎಂದು ನೋಡಿ."