عن أبي هريرة رضي الله عنه عن النبي صلى الله عليه وسلم:
«اللهُمَّ لَا تَجْعَلْ قَبْرِي وَثَنًا، لَعَنَ اللهُ قَوْمًا اتَّخَذُوا قُبُورَ أَنْبِيَائِهِمْ مَسَاجِدَ».
[صحيح] - [رواه أحمد] - [مسند أحمد: 7358]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."
[صحيح] - [رواه أحمد] - [مسند أحمد - 7358]
ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಸಮಾಧಿಯನ್ನು ವಿಗ್ರಹದಂತೆ ಮಾಡಬೇಡ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ಅಂದರೆ, ಜನರು ಅತಿಯಾಗಿ ಮಹತ್ವ ನೀಡುತ್ತಾ (ವೈಭವೀಕರಿಸುತ್ತಾ) ಮತ್ತು ಅಭಿಮುಖೀಕರಿಸಿ ಸಾಷ್ಟಾಂಗ ಮಾಡುತ್ತಾ ಆರಾಧಿಸುವ ವಿಗ್ರಹದಂತೆ ಮಾಡಬೇಡ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಗತ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಸರ್ವಶಕ್ತನಾದ ಅಲ್ಲಾಹು ಶಪಿಸಿದ್ದಾನೆ, ಅಂದರೆ ಅವರನ್ನು ತನ್ನ ಕರುಣೆಯಿಂದ ದೂರಗೊಳಿಸಿದ್ದಾನೆ ಎಂದು ತಿಳಿಸುತ್ತಾರೆ. ಏಕೆಂದರೆ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದರಿಂದ ಜನರು ಅವುಗಳನ್ನು ಆರಾಧಿಸಲು ಮತ್ತು ಅವುಗಳ ಬಗ್ಗೆ ಮಿಥ್ಯನಂಬಿಕೆಗಳನ್ನು ಹೊಂದಲು ಕಾರಣವಾಗುತ್ತದೆ.