عَنْ عَائِشَةَ أُمِّ المؤمنين رضي الله عنها:
أَنَّ أُمَّ سَلَمَةَ ذَكَرَتْ لِرَسُولِ اللهِ صَلَّى اللهُ عَلَيْهِ وَسَلَّمَ كَنِيسَةً رَأَتْهَا بِأَرْضِ الْحَبَشَةِ، يُقَالُ لَهَا مَارِيَةُ، فَذَكَرَتْ لَهُ مَا رَأَتْ فِيهَا مِنَ الصُّوَرِ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «أُولَئِكَ قَوْمٌ إِذَا مَاتَ فِيهِمُ الْعَبْدُ الصَّالِحُ، أَوِ الرَّجُلُ الصَّالِحُ، بَنَوْا عَلَى قَبْرِهِ مَسْجِدًا، وَصَوَّرُوا فِيهِ تِلْكَ الصُّوَرَ، أُولَئِكَ شِرَارُ الْخَلْقِ عِنْدَ اللهِ».
[صحيح] - [متفق عليه] - [صحيح البخاري: 434]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಮ್ಮೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿ ನೋಡಿದ ಮಾರಿಯ ಎಂಬ ಹೆಸರಿನ ಇಗರ್ಜಿಯ ಬಗ್ಗೆ ಮತ್ತು ಅದರಲ್ಲಿ ಅವರು ನೋಡಿದ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನ ಸೆಳೆದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟರು."
[صحيح] - [متفق عليه] - [صحيح البخاري - 434]
ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿದ್ದಾಗ, ಅಲ್ಲಿ ಮಾರಿಯ ಎಂಬ ಹೆಸರಿನ ಇಗರ್ಜಿಯನ್ನು ನೋಡಿದ್ದನ್ನು, ಮತ್ತು ಅದರಲ್ಲಿನ ಚಿತ್ರಗಳು ಮತ್ತು ಅಲಂಕಾರಗಳನ್ನು ಕಂಡು ಆಶ್ಚರ್ಯಪಟ್ಟದ್ದನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಚಿತ್ರಗಳನ್ನು ರಚಿಸಿದ ಕಾರಣವನ್ನು ವಿವರಿಸಿದರು. ಅವರು ಹೇಳಿದರು: ನೀನು ಹೇಳಿದ ಆ ಜನರು ಎಂತಹವರೆಂದರೆ, ಅವರಲ್ಲಿ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಆತನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅಂತಹ ಕೆಲಸಗಳನ್ನು ಮಾಡುವವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ಕೆಟ್ಟವರು ಎಂದು ಅವರು ಸ್ಪಷ್ಟಪಡಿಸಿದರು. ಏಕೆಂದರೆ ಅವರ ಆ ಕೆಲಸವು ಶಿರ್ಕ್ (ಅಲ್ಲಾಹನೊಂದಿಗೆ ಸಹಭಾಗಿಗಳನ್ನು ಸೇರಿಸುವುದು) ಗೆ ಕಾರಣವಾಗುತ್ತದೆ.