عَنْ أَنَسٍ رَضيَ اللهُ عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«لَا تَقُومُ السَّاعَةُ حَتَّى يَتَبَاهَى النَّاسُ فِي الْمَسَاجِدِ».
[صحيح] - [رواه أبو داود والنسائي وابن ماجه] - [سنن أبي داود: 449]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ".
[صحيح] - [رواه أبو داود والنسائي وابن ماجه] - [سنن أبي داود - 449]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಜನರು ತಮ್ಮ ಮಸೀದಿಗಳ ಅಲಂಕಾರದ ಬಗ್ಗೆ ಜಂಭಕೊಚ್ಚಿಕೊಳ್ಳುವುದು, ಅಥವಾ ಕೇವಲ ಅಲ್ಲಾಹನ ಸ್ಮರಣೆಗಾಗಿ ನಿರ್ಮಿಸಲಾದ ಮಸೀದಿಗಳೊಳಗೆ ತಮ್ಮ ಲೌಕಿಕ ವಿಷಯಗಳ ಬಗ್ಗೆ ಹೆಮ್ಮೆಪಡುವುದು ಪುನರುತ್ಥಾನ ದಿನ ಸಮೀಪಿಸುವುದರ ಮತ್ತು ಈ ಪ್ರಪಂಚವು ಅಂತ್ಯಗೊಳ್ಳುವುದರ ಸಂಕೇತಗಳಲ್ಲಿ ಒಂದಾಗಿದೆ.