عَنْ أَنَسِ بْنِ مَالِكٍ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«سَوُّوا صُفُوفَكُمْ، فَإِنَّ تَسْوِيَةَ الصَّفِّ مِنْ تَمَامِ الصَّلَاةِ».
[صحيح] - [متفق عليه] - [صحيح مسلم: 433]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ."
[صحيح] - [متفق عليه] - [صحيح مسلم - 433]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುವವರಿಗೆ ತಮ್ಮ ಸಾಲುಗಳನ್ನು ನೇರಗೊಳಿಸಲು ಮತ್ತು ಕೆಲವರು ಮುಂದೆ ಮತ್ತು ಕೆಲವರು ಹಿಂದೆ ನಿಲ್ಲಬಾರದೆಂದು ಆದೇಶಿಸುತ್ತಿದ್ದಾರೆ. ಸಾಲನ್ನು ನೇರಗೊಳಿಸುವುದು ನಮಾಝಿನ ಸಂಪೂರ್ಣತೆ ಮತ್ತು ಸಮಗ್ರತೆಯ ಭಾಗವಾಗಿದ್ದು, ಸಾಲು ವಕ್ರವಾಗಿರುವುದು ನಮಾಝಿನಲ್ಲಿರುವ ದೋಷ ಮತ್ತು ಕೊರತೆಯಾಗಿದೆ.