عَن أَنَسِ بْنِ مَالِكٍ رضي الله عنه قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«مَا بَالُ أَقْوَامٍ يَرْفَعُونَ أَبْصَارَهُمْ إِلَى السَّمَاءِ فِي صَلاَتِهِمْ»، فَاشْتَدَّ قَوْلُهُ فِي ذَلِكَ، حَتَّى قَالَ: «لَيَنْتَهُنَّ عَنْ ذَلِكَ أَوْ لَتُخْطَفَنَّ أَبْصَارُهُمْ».
[صحيح] - [رواه البخاري] - [صحيح البخاري: 750]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕೆಲವು ಜನರಿಗೆ ಏನಾಗಿದೆ? ಅವರು ತಮ್ಮ ನಮಾಝ್‌ನಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಏಕೆ ಎತ್ತುತ್ತಾರೆ?". ಆ ವಿಷಯದಲ್ಲಿ ಅವರು ತೀಕ್ಷ್ಣವಾಗಿ ಮಾತನಾಡಿದರು. ಎಷ್ಟರವರೆಗೆಂದರೆ ಅವರು ಹೇಳಿದರು: "ಅವರು ಖಂಡಿತವಾಗಿಯೂ ಹಾಗೆ ಮಾಡುವುದನ್ನು ನಿಲ್ಲಿಸಬೇಕು, ಅಥವಾ ಖಂಡಿತವಾಗಿಯೂ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗುವುದು".
[صحيح] - [رواه البخاري] - [صحيح البخاري - 750]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಲ್ಲಿ ಪ್ರಾರ್ಥನೆ (ದುಆ) ಮಾಡುವಾಗ ಅಥವಾ ಬೇರೆ ಸಮಯದಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಎತ್ತುವವರ ಬಗ್ಗೆ ಎಚ್ಚರಿಸಿದರು. ನಂತರ, ಹಾಗೆ ಮಾಡುವವರ ಬಗ್ಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗದರಿಕೆ ಮತ್ತು ಎಚ್ಚರಿಕೆಯು ತೀವ್ರ ಸ್ವರೂಪ ಪಡೆಯಿತು. ಅವರಿಗೆ ತಿಳಿಯದಂತೆಯೇ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗಬಹುದು ಮತ್ತು ಹಠಾತ್ತನೆ ನಿವಾರಿಸಲಾಗಬಹುದು ಮತ್ತು ಅವರು ದೃಷ್ಟಿ ಎಂಬ ಅನುಗ್ರಹವನ್ನು ಕಳೆದುಕೊಂಡು ಬಿಡುವರು ಎಂದು ಅವರು ಭಯಪಡಬೇಕಾಗಿದೆ.