عن أبي أمامة الباهلي رضي الله عنه قال: سمعتُ رسول الله صلى الله عليه وسلم يقول:
«اقرؤوا القرآنَ فإنَّه يأتي يوم القيامة شَفِيعًا لأصحابه، اقرؤوا الزَّهرَاوَين البقرةَ وسورةَ آل عِمران، فإنهما تأتِيان يوم القيامة كأنهما غَمَامَتان، أو كأنهما غَيَايَتانِ، أو كأنهما فِرْقانِ من طَيْر صَوافٍّ، تُحاجَّان عن أصحابهما، اقرؤوا سورة البقرة، فإن أخذها بَرَكة، وتركها حَسْرة، ولا تستطيعها البَطَلَة».

[صحيح] - [رواه مسلم] - [صحيح مسلم: 804]
المزيــد ...

ಅಬೂ ಉಮಾಮಾ ಅಲ್-ಬಾಹಿಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಕುರ್‌ಆನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅದು ಪುನರುತ್ಥಾನ ದಿನದಂದು ತನ್ನ ಸಂಗಾತಿಗಳಿಗೆ (ಅದನ್ನು ಪಠಿಸುವವರಿಗೆ ಮತ್ತು ಪಾಲಿಸುವವರಿಗೆ) ಶಿಫಾರಸ್ಸುದಾರನಾಗಿ ಬರುತ್ತದೆ. 'ಅಝ್ಝಹ್ರಾವೈನ್' ಗಳಾದ ಸೂರಃ ಅಲ್-ಬಖರ ಮತ್ತು ಸೂರಃ ಆಲ್-ಇಮ್ರಾನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅವೆರಡೂ ಪುನರುತ್ಥಾನ ದಿನದಂದು ಎರಡು ಮೋಡಗಳಂತೆ, ಅಥವಾ ಎರಡು ನೆರಳು ನೀಡುವ ವಸ್ತುಗಳಂತೆ, ಅಥವಾ ಸಾಲಾಗಿ ಹಾರಾಡುವ ಎರಡು ಪಕ್ಷಿಗಳ ಗುಂಪುಗಳಂತೆ ಬಂದು, ತಮ್ಮ ಸಂಗಾತಿಗಳ ಪರವಾಗಿ ವಾದಿಸುತ್ತವೆ. ಸೂರಃ ಅಲ್-ಬಖರವನ್ನು ಪಠಿಸಿರಿ. ಖಂಡಿತವಾಗಿಯೂ ಅದನ್ನು (ಪಠಿಸುವುದು/ಪಾಲಿಸುವುದು) 'ಬರಕತ್' (ಸಮೃದ್ಧಿ) ಆಗಿದೆ, ಮತ್ತು ಅದನ್ನು ಬಿಡುವುದು 'ಹಸ್ರತ್' (ವಿಷಾದ) ಆಗಿದೆ, ಮತ್ತು ಮಾಟಗಾರರು ಅದನ್ನು ಎದುರಿಸಲು ಸಾಧ್ಯವಿಲ್ಲ".

[صحيح] - [رواه مسلم] - [صحيح مسلم - 804]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಅನ್ನು ನಿರಂತರವಾಗಿ ಪಠಿಸಲು ಪ್ರೋತ್ಸಾಹಿಸಿದ್ದಾರೆ. ಏಕೆಂದರೆ ಅದು ಪುನರುತ್ಥಾನ ದಿನದಂದು ಅದನ್ನು ಪಠಿಸುವವರಿಗೆ ಮತ್ತು ಅದರಂತೆ ಕಾರ್ಯನಿರ್ವಹಿಸುವವರಿಗೆ ಶಿಫಾರಸು ಮಾಡುತ್ತದೆ. ನಂತರ ಅವರು ಸೂರಃ ಅಲ್-ಬಖರ ಮತ್ತು ಆಲ್-ಇಮ್ರಾನ್ ಅನ್ನು ಪಠಿಸಲು ಒತ್ತಿ ಹೇಳಿದರು ಮತ್ತು ಅವೆರಡಕ್ಕೂ ಅವುಗಳ ಬೆಳಕು ಮತ್ತು ಮಾರ್ಗದರ್ಶನದಿಂದಾಗಿ 'ಅಝ್ಝಹ್ರಾವೈನ್' (ಎರಡು ಪ್ರಕಾಶಮಾನವಾದವುಗಳು) ಎಂದು ಹೆಸರಿಸಿದರು. ಅವೆರಡನ್ನೂ ಪಠಿಸುವುದು, ಅವುಗಳ ಅರ್ಥಗಳನ್ನು ಅಧ್ಯಯನ ಮಾಡುವುದು ಮತ್ತು ಅವುಗಳಲ್ಲಿರುವುದರಂತೆ ಕಾರ್ಯನಿರ್ವಹಿಸುವುದರ ಪ್ರತಿಫಲ ಮತ್ತು ಪುಣ್ಯವು ಪುನರುತ್ಥಾನ ದಿನದಂದು ಎರಡು ಮೋಡಗಳಂತೆ ಅಥವಾ ಇತರ ವಸ್ತುಗಳಂತೆ, ಅಥವಾ ತಮ್ಮ ರೆಕ್ಕೆಗಳನ್ನು ಹರಡಿ ಒಂದಕ್ಕೊಂದು ಸೇರಿಕೊಂಡಿರುವ ಎರಡು ಪಕ್ಷಿಗಳ ಗುಂಪುಗಳಂತೆ ಬಂದು, ತಮ್ಮ ಸಂಗಾತಿಗೆ ನೆರಳು ನೀಡುತ್ತವೆ ಮತ್ತು ಅವನ ಪರವಾಗಿ ವಾದಿಸುತ್ತವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರಃ ಅಲ್-ಬಖರವನ್ನು ನಿರಂತರವಾಗಿ ಪಠಿಸಲು, ಅದರ ಅರ್ಥಗಳನ್ನು ಅಧ್ಯಯನ ಮಾಡಲು ಮತ್ತು ಅದರಲ್ಲಿರುವುದರಂತೆ ಕಾರ್ಯನಿರ್ವಹಿಸಲು ಒತ್ತಿ ಹೇಳಿದರು. ಅದು ಈ ಪ್ರಪಂಚದಲ್ಲಿ ಮತ್ತು ಪರಲೋಕದಲ್ಲಿ ಬರಕತ್ (ಸಮೃದ್ಧಿ) ಮತ್ತು ಮಹಾನ್ ಪ್ರಯೋಜನವನ್ನು ಹೊಂದಿದೆ, ಮತ್ತು ಅದನ್ನು ಬಿಡುವುದು ಪುನರುತ್ಥಾನ ದಿನದಂದು ವಿಷಾದ ಮತ್ತು ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ, ಮತ್ತು ಈ ಸೂರಾದ ಶ್ರೇಷ್ಠತೆಗಳಲ್ಲಿ ಒಂದು ಏನೆಂದರೆ, ಅದನ್ನು ಪಠಿಸುವವನಿಗೆ ಮಾಟಗಾರರು ಹಾನಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಹದೀಸಿನ ಪ್ರಯೋಜನಗಳು

  1. ಕುರ್‌ಆನ್ ಅನ್ನು ಪಠಿಸಲು ಮತ್ತು ಅದನ್ನು ಹೆಚ್ಚಿಸಲು ಆದೇಶಿಸಲಾಗಿದೆ, ಮತ್ತು ಅದು ಪುನರುತ್ಥಾನ ದಿನದಂದು ತನ್ನ ಸಂಗಾತಿಗಳಿಗೆ – ಅದನ್ನು ಪಠಿಸುವವರು, ಅದರ ಮಾರ್ಗದರ್ಶನಕ್ಕೆ ಬದ್ಧರಾಗಿರುವವರು, ಅದು ಆದೇಶಿಸಿದ್ದನ್ನು ಮಾಡುವವರು, ಮತ್ತು ಅದು ನಿಷೇಧಿಸಿದ್ದನ್ನು ಬಿಡುವವರು – ಶಿಫಾರಸು ಮಾಡುತ್ತದೆ ಎಂದು ತಿಳಿಸಲಾಗಿದೆ.
  2. ಸೂರಃ ಅಲ್-ಬಖರ ಮತ್ತು ಆಲ್-ಇಮ್ರಾನ್ ಅನ್ನು ಪಠಿಸುವುದರ ಶ್ರೇಷ್ಠತೆ ಮತ್ತು ಅವುಗಳ ಮಹಾನ್ ಪ್ರತಿಫಲವನ್ನು ತಿಳಿಸಲಾಗಿದೆ.
  3. ಸೂರಃ ಅಲ್-ಬಖರಾವನ್ನು ಪಠಿಸುವುದರ ಶ್ರೇಷ್ಠತೆಯನ್ನು, ಮತ್ತು ಅದು ತನ್ನ ಸಂಗಾತಿಯನ್ನು ಮಾಟದಿಂದ ರಕ್ಷಿಸುತ್ತದೆ ಎಂದು ತಿಳಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು