عن أنس بن مالك رضي الله عنه عن النبي صلى الله عليه وسلم قال:
«مَنْ نَسِيَ صَلَاةً فَلْيُصَلِّ إِذَا ذَكَرَهَا، لَا كَفَّارَةَ لَهَا إِلَّا ذَلِكَ: {وَأَقِمِ الصَّلاةَ لِذِكْرِي} [طه: 14]».
[صحيح] - [متفق عليه] - [صحيح البخاري: 597]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ. "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]"
[صحيح] - [متفق عليه] - [صحيح البخاري - 597]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರಾದರೂ ಕಡ್ಡಾಯ ನಮಾಝನ್ನು ನಿರ್ವಹಿಸಲು ಅದರ ಸಮಯವು ಮುಗಿಯುವ ತನಕ ಮರೆತುಬಿಟ್ಟರೆ, ಅದರ ನೆನಪಾದಾಗ ಅದನ್ನು ನಿರ್ವಹಿಸಲು ತ್ವರೆ ಮಾಡಲಿ. ಮರೆವಿನಿಂದಾಗಿ ನಮಾಝನ್ನು ತೊರೆದವರು ಆ ತಪ್ಪಿಗಾಗಿ ಅದು ನೆನಪಾದಾಗ ನಿರ್ವಹಿಸುವುದಲ್ಲದೆ ಅದಕ್ಕೆ ಬೇರೆ ಪರಿಹಾರವಿಲ್ಲ. ಅಲ್ಲಾಹು ಪವಿತ್ರ ಕುರ್‌ಆನಿನಲ್ಲಿ ಹೇಳುತ್ತಾನೆ: "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]. ಅಂದರೆ, ಮರೆತುಹೋದ ನಮಾಝನ್ನು ನೆನಪಾದಾಗ ನಿರ್ವಹಿಸಿರಿ."