عَنْ عَبْدِ اللَّهِ بنِ مسعُودٍ رَضِيَ اللَّهُ عَنْهُ قَالَ:
ذُكِرَ عِنْدَ النَّبِيِّ صَلَّى اللهُ عَلَيْهِ وَسَلَّمَ رَجُلٌ نَامَ لَيْلَهُ حَتَّى أَصْبَحَ، قَالَ: «ذَاكَ رَجُلٌ بَالَ الشَّيْطَانُ فِي أُذُنَيْهِ، أَوْ قَالَ: فِي أُذُنِهِ».
[صحيح] - [متفق عليه] - [صحيح البخاري: 3270]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆಯವರೆಗೂ ಎದ್ದೇಳದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಅವರು ಹೇಳಿದರು: “ಅವನು ಎಂತಹ ವ್ಯಕ್ತಿಯೆಂದರೆ, ಅವನ ಕಿವಿಗಳಲ್ಲಿ (ಅಥವಾ ಅವರು ಹೀಗೆ ಹೇಳಿದರು: ಅವನ ಕಿವಿಯಲ್ಲಿ) ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.”
[صحيح] - [متفق عليه] - [صحيح البخاري - 3270]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮ್ಮುಖದಲ್ಲಿ ರಾತ್ರಿಯಿಡೀ ಮಲಗಿ ಬೆಳಿಗ್ಗೆ ಸೂರ್ಯೋದಯದವರೆಗೂ ಎದ್ದೇಳದ ಮತ್ತು ಕಡ್ಡಾಯ ನಮಾಝ್ ನಿರ್ವಹಿಸದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು ಎಂತಹ ವ್ಯಕ್ತಿಯೆಂದರೆ ಅವನ ಕಿವಿಯಲ್ಲಿ ಶೈತಾನನು ಮೂತ್ರ ವಿಸರ್ಜನೆ ಮಾಡಿದ್ದಾನೆ.