عَنْ أَبِي هُرَيْرَةَ رضي الله عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«خَيْرُ يَوْمٍ طَلَعَتْ عَلَيْهِ الشَّمْسُ يَوْمُ الْجُمُعَةِ، فِيهِ خُلِقَ آدَمُ، وَفِيهِ أُدْخِلَ الْجَنَّةَ، وَفِيهِ أُخْرِجَ مِنْهَا، وَلَا تَقُومُ السَّاعَةُ إِلَّا فِي يَوْمِ الْجُمُعَةِ».
[صحيح] - [رواه مسلم] - [صحيح مسلم: 854]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಜುಮಾ (ಶುಕ್ರವಾರ،) ದಿನ. ಅಂದು ಆದಮರನ್ನು ಸೃಷ್ಟಿಸಲಾಯಿತು, ಅಂದು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಯಿತು ಮತ್ತು ಅಂದು ಅವರನ್ನು ಸ್ವರ್ಗದಿಂದ ಹೊರಹಾಕಲಾಯಿತು. ಅಂತ್ಯಸಮಯವು ಶುಕ್ರವಾರವಲ್ಲದೆ ಸಂಭವಿಸುವುದಿಲ್ಲ."
[صحيح] - [رواه مسلم] - [صحيح مسلم - 854]
ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಶುಕ್ರವಾರವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ. ಅದರ ವಿಶೇಷತೆಗಳೇನೆಂದರೆ: ಅಲ್ಲಾಹು ಆದಂ (ಅವರ ಮೇಲೆ ಶಾಂತಿಯಿರಲಿ) ರನ್ನು ಶುಕ್ರವಾರದಂದು ಸೃಷ್ಟಿಸಿದನು, ಅಂದು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಿದನು ಮತ್ತು ಅಂದು ಅವರನ್ನು ಅಲ್ಲಿಂದ ಹೊರಹಾಕಿ ಭೂಮಿಗೆ ಇಳಿಸಿದನು. ಅಂತ್ಯಸಮಯವು ಶುಕ್ರವಾರವಲ್ಲದೆ ಸಂಭವಿಸುವುದಿಲ್ಲ.