عن بريدة بن الحصيب رضي الله عنه أنه قال:
بَكِّرُوا بِصَلَاةِ الْعَصْرِ، فَإِنَّ النَّبِيَّ صَلَّى اللهُ عَلَيْهِ وَسَلَّمَ قَالَ: «مَنْ تَرَكَ صَلَاةَ الْعَصْرِ فَقَدْ حَبِطَ عَمَلُهُ».
[صحيح] - [رواه البخاري] - [صحيح البخاري: 553]
المزيــد ...
ಬುರೈದ ಬಿನ್ ಹಸೀಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಸರ್ ನಮಾಜನ್ನು ಬೇಗನೆ ನಿರ್ವಹಿಸಿರಿ. ಏಕೆಂದರೆ ಪ್ರವಾದಿಯವರು ಹೇಳಿದರು: "ಯಾರು ಅಸರ್ ನಮಾಝನ್ನು ತೊರೆಯುತ್ತಾರೋ ಅವರ ಕರ್ಮಗಳು ನಿಷ್ಪಲವಾಗುತ್ತವೆ."
[صحيح] - [رواه البخاري] - [صحيح البخاري - 553]
ಅಸರ್ ನಮಾಝನ್ನು ಉದ್ದೇಶಪೂರ್ವಕವಾಗಿ ಅದರ ಸಮಯಕ್ಕಿಂತ ವಿಳಂಬಗೊಳಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಕೆ ನೀಡುತ್ತಿದ್ದಾರೆ. ಹೀಗೆ ಮಾಡುವವನ ಕರ್ಮಗಳು ನಿಷ್ಪಲವಾಗುತ್ತವೆ ಮತ್ತು ನಿರರ್ಥಕವಾಗುತ್ತವೆ.