عَنْ أَبِي هُرَيْرَةَ رَضيَ اللهُ عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«مَنْ تَعَلَّمَ عِلْمًا مِمَّا يُبْتَغَى بِهِ وَجْهُ اللَّهِ عَزَّ وَجَلَّ لَا يَتَعَلَّمُهُ إِلَّا لِيُصِيبَ بِهِ عَرَضًا مِنَ الدُّنْيَا لَمْ يَجِدْ عَرْفَ الْجَنَّةِ يَوْمَ الْقِيَامَةِ» يَعْنِي رِيحَهَا.
[صحيح] - [رواه أبو داود وابن ماجه وأحمد] - [سنن أبي داود: 3664]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವ ಜ್ಞಾನವನ್ನು ಅಲ್ಲಾಹನ ಸಂತೃಪ್ತಿಯನ್ನು ಅರಸಿ ಕಲಿಯಬೇಕೋ ಅಂತಹ ಜ್ಞಾನವನ್ನು, ಯಾರು ಈ ಪ್ರಪಂಚದ ಒಂದು ಪಾಲನ್ನು ಪಡೆಯಲು ಮಾತ್ರ ಕಲಿಯುತ್ತಾನೋ, ಅವನು ಪುನರುತ್ಥಾನ ದಿನದಂದು ಸ್ವರ್ಗದ ಪರಿಮಳವನ್ನು ಸಹ ಆಸ್ವದಿಸುವುದಿಲ್ಲ." - ಅಂದರೆ ಅದರ ಸುವಾಸನೆಯನ್ನು.
[صحيح] - [رواه أبو داود وابن ماجه وأحمد] - [سنن أبي داود - 3664]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಯಾರು ಶರೀಅತ್‌ನ (ಧಾರ್ಮಿಕ) ಜ್ಞಾನವನ್ನು ಕಲಿಯುತ್ತಾನೋ – ಮೂಲತಃ ಅದನ್ನು ಅಲ್ಲಾಹನ ಸಂತೃಪ್ತಿಗಾಗಿ ಕಲಿಯಬೇಕಾಗಿದೆ – ಆದರೆ ಅವನು ಅದನ್ನು ಕೇವಲ ಈ ಪ್ರಪಂಚದ ಒಂದು ಪಾಲು ಮತ್ತು ಸುಖಭೋಗವನ್ನು, ಅಂದರೆ ಸಂಪತ್ತು ಅಥವಾ ಸ್ಥಾನಮಾನವನ್ನು, ಪಡೆಯಲು ಮತ್ತು ಗಳಿಸಲು ಕಲಿಯುತ್ತಾನೋ, ಅವನು ಪುನರುತ್ಥಾನ ದಿನದಂದು ಸ್ವರ್ಗದ ಪರಿಮಳವನ್ನು ಸಹ ಕಾಣುವುದಿಲ್ಲ.