+ -

عَنْ أَبِي هُرَيْرَةَ رَضيَ اللهُ عنهُ أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«رُبَّ أَشْعَثَ مَدْفُوعٍ بِالْأَبْوَابِ لَوْ أَقْسَمَ عَلَى اللهِ لَأَبَرَّهُ».

[صحيح] - [رواه مسلم] - [صحيح مسلم: 2622]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಎಷ್ಟೋ ಬಾಗಿಲುಗಳಿಂದ, ಕೆದರಿದ ಕೂದಲಿನ ದೂಡಲ್ಪಟ್ಟ ವ್ಯಕ್ತಿಗಳಿದ್ದಾರೆ. ಒಂದು ವೇಳೆ ಅವನು ಅಲ್ಲಾಹನ ಮೇಲೆ ಆಣೆಯಿಟ್ಟರೆ, ಅವನು (ಅಲ್ಲಾಹು) ಖಂಡಿತವಾಗಿಯೂ ಅದನ್ನು ಪೂರ್ಣಗೊಳಿಸುತ್ತಾನೆ".

[صحيح] - [رواه مسلم] - [صحيح مسلم - 2622]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಜನರಲ್ಲಿ ಕೆಲವರು ಕೆದರಿದ ಮತ್ತು ಧೂಳು ತುಂಬಿದ ಕೂದಲಿನವರಾಗಿರುತ್ತಾರೆ. ಅವರು ಅದಕ್ಕೆ ಎಣ್ಣೆ ಹಚ್ಚುವುದಿಲ್ಲ ಅಥವಾ ಅತಿಯಾಗಿ ತೊಳೆಯುವುದಿಲ್ಲ. ಜನರ ದೃಷ್ಟಿಯಲ್ಲಿ ಅವರಿಗೆ ಯಾವುದೇ ಸ್ಥಾನಮಾನವಿರುವುದಿಲ್ಲ. ಅವರು ಅವರನ್ನು ತಮ್ಮ ಬಾಗಿಲುಗಳಿಂದ ದೂಡುತ್ತಾರೆ ಮತ್ತು ತಿರಸ್ಕಾರದಿಂದ ಓಡಿಸುತ್ತಾರೆ. ಆದರೆ, ಒಂದು ವೇಳೆ ಅವನು ಏನಾದರೂ ಸಂಭವಿಸಲಿ ಎಂದು ಆಣೆಯಿಟ್ಟರೆ, ಅಲ್ಲಾಹು ಅವನ ಕೋರಿಕೆಯನ್ನು ಈಡೇರಿಸುವ ಮೂಲಕ ಮತ್ತು ಅವನ ಆಣೆಯು ಸುಳ್ಳಾಗದಂತೆ ಅವನನ್ನು ರಕ್ಷಿಸುವ ಮೂಲಕ, ಅವನನ್ನು ಗೌರವಿಸಿ ಅದನ್ನು ಸಂಭವಿಸುವಂತೆ ಮಾಡುತ್ತಾನೆ. ಇದು ಅಲ್ಲಾಹನ ಬಳಿ ಅವನಿಗಿರುವ ಶ್ರೇಷ್ಠತೆ ಮತ್ತು ಸ್ಥಾನಮಾನದ ಕಾರಣದಿಂದಾಗಿದೆ.

ಹದೀಸಿನ ಪ್ರಯೋಜನಗಳು

  1. ಅಲ್ಲಾಹು ದಾಸನ ಬಾಹ್ಯ ರೂಪವನ್ನು ನೋಡುವುದಿಲ್ಲ, ಬದಲಿಗೆ ಹೃದಯಗಳು ಮತ್ತು ಕರ್ಮಗಳನ್ನು ನೋಡುತ್ತಾನೆ.
  2. ಮನುಷ್ಯನು ತನ್ನ ದೇಹ ಮತ್ತು ಉಡುಪಿನ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಹೆಚ್ಚಾಗಿ ತನ್ನ ಕರ್ಮ ಮತ್ತು ಹೃದಯದ ಶುದ್ಧತೆಯ ಬಗ್ಗೆ ಕಾಳಜಿ ವಹಿಸಬೇಕು.
  3. ಅಲ್ಲಾಹನಿಗಾಗಿ ವಿನಮ್ರತೆ ಮತ್ತು ದೀನತೆಯನ್ನು ತೋರುವುದು ಪ್ರಾರ್ಥನೆಗಳು ಸ್ವೀಕರಿಸಲ್ಪಡಲು ಕಾರಣವಾಗಿದೆ. ಆದ್ದರಿಂದಲೇ, ಅಲ್ಲಾಹು ದೇವಭಯವುಳ್ಳ ಮತ್ತು (ಜನರ ದೃಷ್ಟಿಯಿಂದ) ಮರೆಯಾಗಿರುವವರ ಆಣೆಗಳನ್ನು ಪೂರ್ಣಗೊಳಿಸುತ್ತಾನೆ.
  4. ಜನರು ಪರಸ್ಪರ ತಿರಸ್ಕಾರದಿಂದ ಕಾಣಬಾರದೆಂದು ಅವರಿಗೆ ಪ್ರವಾದಿಯವರು (ಸ) ನೀಡಿದ ಶಿಕ್ಷಣವನ್ನು ವಿವರಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು