عن عائشة رضي الله عنها قالت: سمعتُ من رسول الله صلى الله عليه وسلم يقول في بيتي هذا:
«اللَّهُمَّ مَنْ وَلِيَ مِنْ أَمْرِ أُمَّتِي شَيْئًا فَشَقَّ عَلَيْهِمْ فَاشْقُقْ عَلَيْهِ، وَمَنْ وَلِيَ مِنْ أَمْرِ أُمَّتِي شَيْئًا فَرَفَقَ بِهِمْ فَارْفُقْ بِهِ».
[صحيح] - [رواه مسلم] - [صحيح مسلم: 1828]
المزيــد ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಈ ಮನೆಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಓ ಅಲ್ಲಾಹ್! ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಕಠಿಣವಾಗಿ ವರ್ತಿಸುವವರೊಡನೆ ನೀನು ಕೂಡ ಕಠಿಣವಾಗಿ ವರ್ತಿಸು; ಮತ್ತು ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಮೃದುವಾಗಿ ವರ್ತಿಸುವವರೊಡನೆ ನೀನು ಕೂಡ ಮೃದುವಾಗಿ ವರ್ತಿಸು."
[صحيح] - [رواه مسلم] - [صحيح مسلم - 1828]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುವುದೇನೆಂದರೆ, ಮುಸಲ್ಮಾನರ ಮೇಲೆ ಅಧಿಕಾರವಿರುವವರು, ಅದು ಎಷ್ಟೇ ಚಿಕ್ಕ ಅಥವಾ ಎಷ್ಟೇ ದೊಡ್ಡ ಅಧಿಕಾರವಾಗಿದ್ದರೂ, ಅದು ಪೂರ್ಣ ರೂಪದ ಅಥವಾ ಆಂಶಿಕ ಅಧಿಕಾರವಾಗಿದ್ದರೂ, ಅವರು ಮುಸ್ಲಿಮರೊಡನೆ ಮೃದುವಾಗಿ ವರ್ತಿಸದೆ ಕಠಿಣವಾಗಿ ವರ್ತಿಸಿದರೆ, ಅವರು ಮಾಡಿದಂತೆಯೇ ಅಲ್ಲಾಹು ಕೂಡ ಅವರೊಡನೆ ಕಠಿಣವಾಗಿ ವರ್ತಿಸುತ್ತಾನೆ.
ಆದರೆ ಅವರು ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸಿದರೆ, ಅಲ್ಲಾಹು ಕೂಡ ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸುತ್ತಾನೆ.