عَن قُطْبَةَ بنِ مَالِكٍ رَضيَ اللهُ عنه قَالَ: كَانَ النَّبِيُّ صَلَّى اللَّهُ عَلَيْهِ وَسَلَّمَ يَقُولُ:
«اللَّهُمَّ إِنِّي أَعُوذُ بِكَ مِنْ مُنْكَرَاتِ الأَخْلاَقِ وَالأَعْمَالِ وَالأَهْوَاءِ».
[صحيح] - [رواه الترمذي] - [سنن الترمذي: 3591]
المزيــد ...
ಖುತ್ಬಾ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು:
"ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)
[صحيح] - [رواه الترمذي] - [سنن الترمذي - 3591]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಗಳಲ್ಲಿ ಇದೂ ಒಂದಾಗಿತ್ತು: "ಅಲ್ಲಾಹುಮ್ಮ ಇನ್ನೀ ಅಊದು" ಓ ಅಲ್ಲಾಹನೇ, ನಾನು ಅಭಯ ಕೋರುತ್ತೇನೆ, ಮೊರೆ ಹೋಗುತ್ತೇನೆ ಮತ್ತು ರಕ್ಷಣೆ ಬೇಡುತ್ತೇನೆ "ಬಿಕ" ನಿನ್ನಲ್ಲಿ, ನಿನ್ನನ್ನು ಹೊರತುಪಡಿಸಿ ಬೇರೆ ಯಾರಲ್ಲೂ ಅಲ್ಲ, "ಮಿನ್ ಮುನ್ಕರಾತಿ" ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ ವಿಷಯಗಳಿಂದ, "ಅಲ್-ಅಖ್ಲಾಖ್" ದ್ವೇಷ/ಹಗೆತನ, ಅಸೂಯೆ, ಅಹಂಕಾರ ಮುಂತಾದ ಸ್ವಭಾವಗಳಿಂದ, "ವ" ಮತ್ತು ನಿಂದನೀಯ "ಅಲ್-ಅಅ್‌ಮಾಲ್" ಅಂದರೆ, ಬೈಯ್ಯುವುದು, ನಿಂದಿಸುವುದು ಮುಂತಾದ ಕಾರ್ಯಗಳಿಂದ, "ವ" ಮತ್ತು ಎಲ್ಲಾ "ಅಲ್-ಅಹ್ವಾಅ್" ಇಚ್ಛೆಗಳಿಂದ, ಅಂದರೆ, ಮನಸ್ಸು ಬಯಸುವ ಮತ್ತು ಶರೀಅತ್‌ಗೆ ವಿರುದ್ಧವಾಗಿರುವ ಇಚ್ಛೆಗಳಿಂದ (ಅಭಯ ಕೋರುತ್ತೇನೆ).