عَنِ ابْنِ عَبَّاسٍ رضي الله عنهما قَالَ:
مَرَّ النَّبِيُّ صَلَّى اللهُ عَلَيْهِ وَسَلَّمَ بِقَبْرَيْنِ، فَقَالَ: «إِنَّهُمَا لَيُعَذَّبَانِ، وَمَا يُعَذَّبَانِ فِي كَبِيرٍ، أَمَّا أَحَدُهُمَا فَكَانَ لاَ يَسْتَتِرُ مِنَ البَوْلِ، وَأَمَّا الآخَرُ فَكَانَ يَمْشِي بِالنَّمِيمَةِ» ثُمَّ أَخَذَ جَرِيدَةً رَطْبَةً، فَشَقَّهَا نِصْفَيْنِ، فَغَرَزَ فِي كُلِّ قَبْرٍ وَاحِدَةً، قَالُوا: يَا رَسُولَ اللَّهِ، لِمَ فَعَلْتَ هَذَا؟ قَالَ: «لَعَلَّهُ يُخَفِّفُ عَنْهُمَا مَا لَمْ يَيْبَسَا».
[صحيح] - [متفق عليه] - [صحيح البخاري: 218]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಮಾಧಿಗಳ ಮೂಲಕ ಹಾದು ಹೋಗುತ್ತಿದ್ದಾಗ ಹೇಳಿದರು: "ಇವರಿಬ್ಬರಿಗೂ ಶಿಕ್ಷೆ ನೀಡಲಾಗುತ್ತಿದೆ. ಇವರಿಗೆ ಶಿಕ್ಷೆ ನೀಡಲಾಗುತ್ತಿರುವುದು ಯಾವುದೋ ದೊಡ್ಡ ತಪ್ಪಿಗಲ್ಲ. ಇವರಲ್ಲೊಬ್ಬನು ಮೂತ್ರದ ಮಾಲಿನ್ಯದಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬನು ಚಾಡಿ ಮಾತುಗಳೊಂದಿಗೆ ನಡೆದಾಡುತ್ತಿದ್ದ." ನಂತರ ಅವರು ಖರ್ಜೂರದ ಹಸಿಕೊಂಬೆಯನ್ನು ತೆಗೆದು ಎರಡು ತುಂಡು ಮಾಡಿದರು. ನಂತರ ಒಂದೊಂದು ಸಮಾಧಿಯ ಮೇಲೆ ಒಂದೊಂದನ್ನು ನೆಟ್ಟರು. ಸಹಚರರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಾವೇಕೆ ಹೀಗೆ ಮಾಡಿದಿರಿ?" ಅವರು ಉತ್ತರಿಸಿದರು: "ಅವು ಒಣಗುವ ತನಕ ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿ ಸಿಗಬಹುದು."
[صحيح] - [متفق عليه] - [صحيح البخاري - 218]
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸಮಾಧಿಗಳ ಮೂಲಕ ಹಾದುಹೋಗುತ್ತಿದ್ದಾಗ ಹೇಳಿದರು: ಈ ಎರಡು ಸಮಾಧಿಗಳಲ್ಲಿರುವವರಿಗೆ ಶಿಕ್ಷೆ ನೀಡಲಾಗುತ್ತಿದೆ. ಇವರಿಗೆ ಶಿಕ್ಷೆ ನೀಡಲಾಗುತ್ತಿರುವುದು ನಿಮ್ಮ ದೃಷ್ಟಿಯಲ್ಲಿ ದೊಡ್ಡ ವಿಷಯಕ್ಕಲ್ಲದಿದ್ದರೂ ಅಲ್ಲಾಹನ ದೃಷ್ಟಿಯಲ್ಲಿ ಅದು ದೊಡ್ಡ ವಿಷಯವಾಗಿದೆ. ಅವರಲ್ಲಿ ಒಬ್ಬರು ಮೂತ್ರ ವಿಸರ್ಜನೆ ಮಾಡುವಾಗ ದೇಹ ಮತ್ತು ಬಟ್ಟೆಯನ್ನು ಮೂತ್ರದಿಂದ ರಕ್ಷಿಸಿಕೊಳ್ಳಲು ಕಾಳಜಿ ವಹಿಸುತ್ತಿರಲಿಲ್ಲ. ಇನ್ನೊಬ್ಬನು ಜನರ ನಡುವೆ ಚಾಡಿ ಮಾತಿನೊಂದಿಗೆ ನಡೆಯುತ್ತಿದ್ದ. ಜನರ ನಡುವೆ ಒಡಕು ಮತ್ತು ಕಲಹ ಉಂಟು ಮಾಡುವ ಕೆಟ್ಟ ಉದ್ದೇಶದಿಂದ ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುತ್ತಿದ್ದ.