عَنْ جَابِرِ بْنِ عَبْدِ اللَّهِ رضي الله عنهما أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ:
«لَا تَعَلَّمُوا الْعِلْمَ لِتُبَاهُوا بِهِ الْعُلَمَاءَ، وَلَا لِتُمَارُوا بِهِ السُّفَهَاءَ، وَلَا تَخَيَّرُوا بِهِ الْمَجَالِسَ، فَمَنْ فَعَلَ ذَلِكَ، فَالنَّارُ النَّارُ».
[صحيح] - [رواه ابن ماجه] - [سنن ابن ماجه: 254]
المزيــد ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ವಿದ್ವಾಂಸರ ನಡುವೆ ಮೆರೆಯಲು, ಅಥವಾ ಅವಿವೇಕಿಗಳೊಡನೆ ತರ್ಕಿಸಲು, ಅಥವಾ ಸಭೆಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆಯಲು ಜ್ಞಾನವನ್ನು ಕಲಿಯಬೇಡಿ. ಈ ಉದ್ದೇಶಗಳಿಗಾಗಿ ಕಲಿಯುವವನಿಗೆ ನರಕವೇ ಗತಿ, ನರಕವೇ ಗತಿ."
[صحيح] - [رواه ابن ماجه] - [سنن ابن ماجه - 254]
ವಿದ್ವಾಂಸರ ನಡುವೆ ನಾನು ಕೂಡ ನಿಮ್ಮಂತೆ ಒಬ್ಬ ವಿದ್ವಾಂಸ ಎಂದು ತೋರಿಸುವುದಕ್ಕಾಗಿ ಮತ್ತು ಜಂಬಪಡುವುದಕ್ಕಾಗಿ, ಅಥವಾ ಅವಿವೇಕಿಗಳೊಡನೆ ಮತ್ತು ಅಜ್ಞಾನಿಗಳೊಡನೆ ಸಂಭಾಷಣೆ ಮಾಡಿ ತರ್ಕಿಸುವುದಕ್ಕಾಗಿ, ಅಥವಾ ಸಭೆಗಳಲ್ಲಿ ಗೌರವ ಸ್ಥಾನವನ್ನು ಮತ್ತು ಪ್ರಥಮ ಆದ್ಯತೆಯನ್ನು ಪಡೆಯುವುದಕ್ಕಾಗಿ ಜ್ಞಾನ ಸಂಪಾದಿಸಬಾರದು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುತ್ತಿದ್ದಾರೆ. ಯಾರು ಈ ಉದ್ದೇಶಗಳಿಗಾಗಿ ಜ್ಞಾನವನ್ನು ಕಲಿಯುತ್ತಾರೋ, ಅವರು ನರಕಕ್ಕೆ ಅರ್ಹರಾಗುತ್ತಾರೆ. ಏಕೆಂದರೆ, ಅವರು ಜ್ಞಾನ ಕಲಿತದ್ದು (ಅಲ್ಲಾಹನ ಸಂಪ್ರೀತಿಗಲ್ಲ; ಬದಲಿಗೆ) ತೋರಿಕೆಗಾಗಿದೆ. ಜ್ಞಾನ ಕಲಿಯುವುದರಲ್ಲಿ ಅವರಿಗೆ ಯಾವುದೇ ನಿಷ್ಕಳಂಕತೆಯಿಲ್ಲ.