+ -

عَنْ أَنَسٍ رَضِيَ اللَّهُ عَنْهُ، قَالَ: لَأُحَدِّثَنَّكُمْ حَدِيثًا سَمِعْتُهُ مِنْ رَسُولِ اللَّهِ صَلَّى اللهُ عَلَيْهِ وَسَلَّمَ لاَ يُحَدِّثُكُمْ بِهِ أَحَدٌ غَيْرِي: سَمِعْتُ رَسُولَ اللَّهِ صَلَّى اللهُ عَلَيْهِ وَسَلَّمَ يَقُولُ:
«إِنَّ مِنْ أَشْرَاطِ السَّاعَةِ أَنْ يُرْفَعَ العِلْمُ، وَيَكْثُرَ الجَهْلُ، وَيَكْثُرَ الزِّنَا، وَيَكْثُرَ شُرْبُ الخَمْرِ، وَيَقِلَّ الرِّجَالُ، وَيَكْثُرَ النِّسَاءُ حَتَّى يَكُونَ لِخَمْسِينَ امْرَأَةً القَيِّمُ الوَاحِدُ».

[صحيح] - [متفق عليه] - [صحيح البخاري: 5231]
المزيــد ...

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನನ್ನ ಹೊರತು ಯಾರೂ ನಿಮಗೆ ತಿಳಿಸಿಕೊಡದ ಒಂದು ಹದೀಸನ್ನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ನಿಮಗೆ ತಿಳಿಸಿಕೊಡುತ್ತೇನೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
“ನಿಶ್ಚಯವಾಗಿಯೂ ಜ್ಞಾನ ಎತ್ತಲಾಗುವುದು, ಅಜ್ಞಾನ ಹೆಚ್ಚಾಗುವುದು, ವ್ಯಭಿಚಾರ ಹೆಚ್ಚಾಗುವುದು, ಮಧ್ಯಪಾನ ಹೆಚ್ಚಾಗುವುದು, ಪುರುಷರು ಕಡಿಮೆಯಾಗಿ ಮಹಿಳೆಯರು ಹೆಚ್ಚಾಗುವುದು, ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರನ್ನು ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರವಿರುವುದು ಪ್ರಳಯದ ಚಿಹ್ನೆಗಳಾಗಿವೆ."

[صحيح] - [متفق عليه]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಳಯವು ಹತ್ತಿರವಾಗುತ್ತಿರುವ ಚಿಹ್ನೆಗಳನ್ನು ವಿವರಿಸಿದ್ದಾರೆ. ಆಗ ವಿದ್ವಾಂಸರ ಮರಣದಿಂದಾಗಿ ಧಾರ್ಮಿಕ ಜ್ಞಾನವನ್ನು ಎತ್ತಲಾಗುತ್ತದೆ. ಇದರ ಪರಿಣಾಮವಾಗಿ ಅಜ್ಞಾನವು ಹೆಚ್ಚಾಗಿ ವ್ಯಾಪಕವಾಗಿ ಹರಡಿಕೊಳ್ಳುತ್ತದೆ, ವ್ಯಭಿಚಾರ ಮತ್ತು ಅಶ್ಲೀಲತೆಗಳು ವ್ಯಾಪಕವಾಗುತ್ತವೆ, ಮಧ್ಯಪಾನ ಹೆಚ್ಚಾಗುತ್ತದೆ, ಪುರುಷರ ಸಂಖ್ಯೆ ಕಡಿಮೆಯಾಗಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರ ಉಸ್ತುವಾರಿ ಮತ್ತು ಯೋಗಕ್ಷೇಮ ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರ ಇರುತ್ತಾನೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಮಲಯಾಳಂ ತೆಲುಗು ಸ್ವಾಹಿಲಿ ಬರ್ಮೀ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية التشيكية المالاجاشية الإيطالية الأورومو الأذربيجانية الأوزبكية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಪ್ರಳಯದ ಕೆಲವು ಚಿಹ್ನೆಗಳನ್ನು ಈ ಹದೀಸ್ ವಿವರಿಸುತ್ತದೆ.
  2. ಪ್ರಳಯ ಯಾವಾಗ ಸಂಭವಿಸುತ್ತದೆ ಎಂಬುದು ಅಲ್ಲಾಹನ ಬಳಿ ಮಾತ್ರವಿರುವ ಅಗೋಚರ ಜ್ಞಾನಗಳಲ್ಲಿ ಸೇರಿದ್ದಾಗಿದೆ.
  3. ಧಾರ್ಮಿಕ ಜ್ಞಾನವು ಕಳೆದುಹೋಗುವುದಕ್ಕೆ ಮುಂಚೆ ಅದನ್ನು ಕಲಿತುಕೊಳ್ಳಬೇಕೆಂದು ಈ ಹದೀಸ್ ಪ್ರೇರೇಪಿಸುತ್ತದೆ.
ಇನ್ನಷ್ಟು