+ -

عَنْ أَبِي الْجَعْدِ الضَّمْرِيِّ رَضيَ اللهُ عنهُ، وَكَانَتْ لَهُ صُحْبَةٌ، أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«مَنْ تَرَكَ ثَلَاثَ جُمَعٍ تَهَاوُنًا بِهَا طَبَعَ اللَّهُ عَلَى قَلْبِهِ».

[صحيح] - [رواه أبو داود والترمذي والنسائي وابن ماجه وأحمد] - [سنن أبي داود: 1052]
المزيــد ...

ಅಬುಲ್ ಜಅದ್ ಅದ್ದಮ್ರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ (ಇವರು ಸಹಾಬಿವರ್ಯರಾಗಿದ್ದರು): ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಉದಾಸೀನತೆಯಿಂದ ಮೂರು ಜುಮುಅ (ಶುಕ್ರವಾರದ ನಮಾಝ್) ಗಳನ್ನು ಬಿಡುತ್ತಾರೋ, ಅಲ್ಲಾಹು ಅವರ ಹೃದಯದ ಮೇಲೆ ಮೊಹರು ಹಾಕುತ್ತಾನೆ".

[صحيح] - [رواه أبو داود والترمذي والنسائي وابن ماجه وأحمد] - [سنن أبي داود - 1052]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜುಮುಅ ನಮಾಝ್ ಬಿಡುವುದರ ಬಗ್ಗೆ ಮತ್ತು ಯಾರು ಉದಾಸೀನತೆ ಮತ್ತು ನಿರ್ಲಕ್ಷ್ಯದಿಂದ, ಯಾವುದೇ ಸಕಾರಣವಿಲ್ಲದೆ ಮೂರು ಬಾರಿ ಜುಮುಅ ನಮಾಝ್ ಅನ್ನು ಬಿಡುತ್ತಾರೋ, ಅಲ್ಲಾಹು ಅವರ ಹೃದಯಕ್ಕೆ ಒಳಿತು ತಲುಪದಂತೆ ತಡೆದು, ಅದರ ಮೇಲೆ ಮುದ್ರೆ ಒತ್ತುತ್ತಾನೆ ಮತ್ತು ಅದನ್ನು ಮುಚ್ಚಿಬಿಡುತ್ತಾನೆ ಎಂದು ಎಚ್ಚರಿಸಿದ್ದಾರೆ.

ಹದೀಸಿನ ಪ್ರಯೋಜನಗಳು

  1. ಜುಮುಅ ನಮಾಝ್ 'ಫರ್ಝ್ ಐನ್' (ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಕಡ್ಡಾಯ) ಆಗಿದೆ ಎಂಬ ಬಗ್ಗೆ ವಿದ್ವಾಂಸರ ಸರ್ವಾನುಮತವನ್ನು (ಇಜ್ಮಾ) ಇಬ್ನುಲ್ ಮುಂದಿರ್ ಉಲ್ಲೇಖಿಸಿದ್ದಾರೆ.
  2. ಉದಾಸೀನತೆಯಿಂದ ಜುಮುಅ ನಮಾಝ್ ಬಿಟ್ಟವನ ಹೃದಯದ ಮೇಲೆ ಅಲ್ಲಾಹು ಮೊಹರು ಹಾಕುತ್ತಾನೆ ಎಂಬ ಎಚ್ಚರಿಕೆ ನೀಡಲಾಗಿದೆ.
  3. ಸಕಾರಣದಿಂದ ಜುಮುಅ ನಮಾಝ್ ಬಿಡುವವನು ಈ ಎಚ್ಚರಿಕೆಯಲ್ಲಿ ಒಳಪಡುವುದಿಲ್ಲ.
  4. ಇಮಾಮ್ ಶೌಕಾನಿ ಹೇಳುತ್ತಾರೆ: “ಮೂರು ಜುಮುಅಗಳು” ಎಂಬ ಮಾತು. ಇದು ಸತತವಾಗಿರಲಿ ಅಥವಾ ಪ್ರತ್ಯೇಕವಾಗಿರಲಿ, ಒಟ್ಟಾರೆಯಾಗಿ ಮೂರು ಬಾರಿ ಬಿಡುವುದನ್ನು ಸೂಚಿಸುವ ಸಾಧ್ಯತೆಯಿದೆ. ಎಷ್ಟರಮಟ್ಟಿಗೆ ಎಂದರೆ, ಅವನು ಪ್ರತಿ ವರ್ಷ ಒಂದು ಜುಮುಅ ಬಿಟ್ಟರೂ, ಮೂರನೆಯದರ ನಂತರ ಅಲ್ಲಾಹು ಅವನ ಹೃದಯದ ಮೇಲೆ ಮೊಹರು ಹಾಕುತ್ತಾನೆ. ಇದು ಹದೀಸ್‌ನ ಬಾಹ್ಯ ಅರ್ಥವಾಗಿದೆ. ಅಥವಾ ಇದರ ಉದ್ದೇಶ ಸತತವಾಗಿ ಮೂರು ಜುಮುಅಗಳು ಆಗಿರುವ ಸಾಧ್ಯತೆಯೂ ಇದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ